

ಬೆಳಗಾವಿ: ಪ್ರೀತಿಗೆ ಅಡ್ಡ ಬಂದನೆಂದು ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿನಾಯಕ ಹೊರಕೇರಿ(26) ಬಂಧಿತ ಆರೋಪಿ. ಡಿ.16ರಂದು ಯಮಕನಮರಡಿ ನಿವಾಸಿ ಭರಮಾ ದುಪದಾಳೆ ಎಂಬಾತನ ಮೇಲೆ ವಿನಾಯಕ ಗುಂಡಿನ ದಾಳಿ ಮಾಡಿದ್ದ.
ವಿನಾಯಕ, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಆದರೆ, ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಆಕೆಯ ದೂರದ ಸಂಬಂಧಿ ಭರಮಾ ಅಡ್ಡಿಯಾಗಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಆತನ ಮೇಲೆ ವಿನಾಯಕ ಗುಂಡಿನ ದಾಳಿ ಮಾಡಿದ್ದಾನೆ.
ಅದೃಷ್ಟವಶಾತ್ ಭರಮಾ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)