

ಯಲ್ಲಾಪುರ: ಖಾಸಗಿ ಬಸ್-ಕಾರಿನ ನಡುವೆ ಅಪಘಾತ ಸಂಭವಿಸಿದೆ. ೩೦ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ತಾಲೂಕಿನ ಆರತಿಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ನಡೆದಿದೆ.
ಮಹಾರಾಷ್ಟ್ರ ಪ್ರಯಾಣಿಕರು: ಮಹಾರಾಷ್ಟ್ರ ಪ್ರವಾಸಿಗರು ಖಾಸಗಿ ಬಸ್‌ನಲ್ಲಿ ಗೋಕರ್ಣ ಕಡೆಗೆ ಹೊರಟಿದ್ದರು. ಕಾರಿನಲ್ಲಿದ್ದವರು ಮಂಗಳೂರಿನಿಂದ ಮುಂಬೈಗೆ ಹೊರಟಿದ್ದರು. ಡಿಕ್ಕಿಯ ರಭಸಕ್ಕೆ ಬಸ್ ರಸ್ತೆಯ ಪಕ್ಕದ ಗಟಾರ್‌ನಲ್ಲಿ ಬಿದ್ದಿದೆ. ಕಾರು ಜಖಂಗೊಂಡಿದೆ. ಎರಡೂ ವಾಹನಗಳಲ್ಲಿದ್ದ ಒಟ್ಟು ೩೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.