ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಬದ್ಧ

27ugl1
Published on

ಉಗರಗೋಳ: ಯಲ್ಲಮ್ಮ ದೇವಸ್ಥಾನದ ಅಭಿವದ್ಧಿ ಪ್ರಾಧಿಕಾರದ ಉಪಾಧ್ಯರಾಗಿ ನೇಮಕಗೊಂಡ ಶಾಸಕ ವಿಶ್ವಾಸ ವೆದ್ಯ ಅವರನ್ನು ಶನಿವಾರ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ದೇವಸ್ಥಾನ ಅಭಿವದ್ಧಿ ಪ್ರಾಧಿಕಾರದ ನಿರ್ದೇಶಕ ಸಿದ್ದನಗೌಡ ಗೋಡ್ರಾಸಿ ಶಾಲು ಹೊದಿಸಿ ಸತ್ಕರಿಸಿದರು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಅಭಿವದ್ಧಿಗಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮುಖ್ಯಮಂತ್ರಿ, ಮುಜರಾಯಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶದಲ್ಲಿ ಉತ್ತಮವಾಗಿ ಕೆಲಸ ಮಾಡಿ ಯಲ್ಲಮ್ಮನಗುಡ್ಡದ ಸಮಗ್ರ ಅಭಿವದ್ಧಿಗೆ ಪ್ರಯತ್ನಿಸುತ್ತೇನೆ ಎಂದರು.

ಚಂದ್ರು ಶಾಮನವರ, ನಾಗರತ್ನಾ ಚೋಳಿನ, ರೇಣುಕಾ ಶಿಂತ್ರಿ, ಬಿ.ಎನ್​. ಮುದಗೌಡ್ರ, ಅಲ್ಲಮಪ್ರಭು ಪ್ರಭುನವರ, ಆರ್​.ಎಚ್​. ಸವದತ್ತಿ, ಸಿ.ಎನ್​.ಕುಲಕರ್ಣಿ, ಏಕನಗೌಡ ಮುದ್ದನಗೌಡ್ರ, ಕೆಂಚನಗೌಡ ರೆಣ್ಕೀಗೌಡ್ರ, ಬಸವರಾಜ ಆಯಟ್ಟಿ, ಪಂಡಿತ ಯಡೂರಯ್ಯ, ಉಗರಗೋಳದ ಪೊಲೇಶಿ, ಪ್ರವಿಣ ರಾಮಪ್ಪನವರ, ಆನಂದ ಮುದ್ರಗಣಿ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net