ಅಲ್ಮೆರಾ ಕನ್ನಡಿಯೊಳಗೆ ಇಟಗಿ ಭೀಮಾಂಬಿಕಾ ದೇವಿ!

BHIMAMBIKA
ಅಲ್ಮೆರಾದ ಕನ್ನಡಿಯಲ್ಲಿ ಶ್ರೀ ಭೀಮಾಂಬಿಕಾದೇವಿ ಚಿತ್ರ ಇರುವ ರೀತಿ ಕಾಣಿಸಿಕೊಂಡಿರುವುದು.
Published on

ಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗಬಸವೇಶ್ವರ ದೇವಸ್ಥಾನದ ಅಲ್ಮೆರಾದ ಕನ್ನಡಿಯೊಳಗೆ ಇಟಗಿ ಶ್ರೀ ಭೀಮಾಂಬಿಕಾ ದೇವಿಯ ಚಿತ್ರ ಮೂಡಿದೆ ಎಂಬ ವಿಷಯ ತಿಳಿದು ಜನರಿಗೆ ಗೊಂದಲ ಸೃಷ್ಟಿಯಾದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಅದನ್ನು ವೀಕ್ಷಿಸಲು ದೇವಾಲಯಕ್ಕೆ ದೌಡಾಯಿಸುತ್ತಿದ್ದಾರೆ.

ದೇವಸ್ಥಾನದ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಿದ್ದು, ಅಲ್ಮೆರಾದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಸಾಮಗ್ರಿ ಇಡಲಾಗಿದೆ. ದೇವಸ್ಥಾನ ಕಮಿಟಿ ಸದಸ್ಯ ಸಿಸಿಟಿವಿ ನೋಡಿದಾಗ ಅಲ್ಮೆರಾದ ಕನ್ನಡಿಯಲ್ಲಿ ಭೀಮಾಂಬಿಕಾ ದೇವಿಯ ಚಿತ್ರ ಕಾಣಿಸಿಕೊಂಡಿದೆ ಎಂಬ ವಿಷಯ ತಿಳಿದು ಜನಸಾಗರವೇ ಹರಿದು ಬಂದಿದೆ. ನಿವಾಸಿಗಳು ಭಕ್ತಿ ಭಾವದಿಂದ ಸಿಸಿಟಿವಿಯಲ್ಲಿನ ಭೀಮಾಂಬಿಕಾ ದೇವಿ ಚಿತ್ರಕ್ಕೆ ದೇವಿಯ ರೂಪವೆಂದು ಭಾವಿಸಿ ಕೈಮುಗಿದಿದ್ದಾರೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಾಸ್ತವವಾಗಿ ಕನ್ನಡಿಯಲ್ಲಿ ದೇವರ ಚಿತ್ರ ಮೂಡಿಲ್ಲ. ಎದುರಿಗೆ ಇರುವ ಫ್ಯಾನ್‌ನ ನೆರಳು ಬಿದ್ದು ದೇವರ ಚಿತ್ರ ಮೂಡಿದಂತೆ ಕಾಣಿಸಿದೆ ಎಂದು ಜನರಿಗೆ ತಿಳಿವಳಿಕೆ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net