

ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ಒಂಬತ್ತನೇ ವಾರ್ಷಿಕೋತ್ಸವ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಸಭಾಂಗಣದಲ್ಲಿ ನಡೆಯಿತು. ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಶ್ರೀ ಕಾರ್ಯಕ್ರಮ ಉದ್ಘಾಟಿಸಿದರು.
ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷತೆ ವಹಿಸಿದ್ದರು.ಮನೋವಿಜ್ಞಾನಿ ನವೀನ ಎಲ್ಲಂಗಳ ಶುಭಹಾರೈಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪ್ಲಸ್ ಟು ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗೋವಿಂದ ಬಳ್ಳಮೂಲೆ ಅಭಿನಂದನಾ ಭಾಷಣಗೈದರು. ಪಲ್ಲವಿ ಹರಿಕೃಷ್ಣ ಪೆರಡಂಜಿ, ಹರಿಕೃಷ್ಣ ಪೆರಡಂಜಿ, ಮಧುರಕಾನನ ಗಣಪತಿ ಭಟ್ ಪ್ರಶಸ್ತಿ ಪತ್ರ ವಾಚಿಸಿದರು.
ವರ್ಣಪ್ರಸಾದ್ ವಯನಾಡು ಪ್ರಾರ್ಥಿಸಿದರು. ಕಾರ್ಯದರ್ಶಿ ಮುರಳೀಕೃಷ್ಣ ಸ್ಕಂದ ಪ್ರಸ್ತಾವನೆಗೈದು ಸ್ವಾಗತಿಸಿದರು. ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಿಸಿದರು. ವಿದುಷಿಃ ಅನುಪಮಾ ರಾಘವೇಂದ್ರ ಉಡುಪುಮೂಲೆ ವಂದಿಸಿದರು.
ಮಕ್ಕಳಿಂದ ಶರಸೇತುಬಂಧನ ತಾಳಮದ್ದಳೆ ನಡೆಯಿತು. ಸಾಧ್ವಿಕೃಷ್ಣ ವಯನಾಡು ನೃತ್ಯಾರ್ಪಣ ಪ್ರದರ್ಶಿಸಿದರು. ಬಳಿಕ ನರಕಾಸುರ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಪ್ರತಿಷ್ಠಾನದ ವತಿಯಿಂದ ಪ್ರಸಿದ್ಧ ಭಾಗವತ ಶಿವಶಂಕರ ಭಟ್ ತಲ್ಪನಾಜೆ ಅವರಿಗೆ ಪೆರಡಂಜಿ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು. ಸೀತಾರಾಮ ಬಳ್ಳುಳ್ಳಾಯ ಮತ್ತು ಕೃಷ್ಣ ಭಟ್ ಅಡ್ಕ ಅವರನ್ನು ಗೌರವಿಸಲಾಯಿತು. ಕೈಗಾರಿಕಾ ರಂಗದಲ್ಲಿ ಅತ್ಯುತ್ತಮ ಉತ್ಪಾದನಾ ಉದ್ಯಮ ಪ್ರಶಸ್ತಿ ಪುರಸ್ಕೃತ ಮುರಳಿಕೃಷ್ಣ ಮತ್ತು ಹರಿ ಕೃಷ್ಣ ಸ್ಕಂದ ಅವರನ್ನು ಅಭಿನಂದಿಸಲಾಯಿತು.