ನವಜೀವನ ಶಾಲೆಗೆ ಮಧುರ ವನ ಯೋಜನೆ ಪ್ರಶಸ್ತಿ

award
ನವಜೀವನ ಶಾಲೆಯ ಪ್ರತಿನಿಧಿಗಳು ಮಧುರ ವನ ಯೋಜನೆ ಪ್ರಶಸ್ತಿ ಸ್ವೀಕರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊದಲಾದವರಿದ್ದರು.
Published on

ಬದಿಯಡ್ಕ: ಜಿಲ್ಲಾ ಪಂಚಾಯಿತಿಯ ಜೀವ ವೈವಿಧ್ಯ ಸಂರಕ್ಷಣೆ ಸಮಿತಿ ಮಧುರ ವನ ಯೋಜನೆಯ ಪ್ರಶಸ್ತಿ 2024ರಲ್ಲಿ, ದ್ವಿತೀಯ ಸ್ಥಾನ ನವಜೀವನ ಪೆರಡಾಲ ಶಾಲೆಗೆ ಲಭಿಸಿದೆ.

ಪ್ರಶಸ್ತಿ ವಿತರಣಾ ಸಮಾರಂಭ ಕುಂಡಂಕುಳಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕಿ ಮಿನಿ ಪಿ, ಎಸ್.ಪಿ.ಸಿ., ನವಜೀವನ ಶಾಲಾ ತರಬೇತುದಾರ ವಿಜಯನ್ ಮಾಸ್ತರ್, ವತ್ಸಲಾ ಮತ್ತು ಸುನೀಲ್ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಪಸ್ಥಿತರಿದ್ದರು.

ಶಾಲಾ ರಕ್ಷಕ-ಶಿಕ್ಷಕ ಸಂಘ ಮತ್ತು ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net