ನಾಳೆ ಯಕ್ಷೋತ್ಸವ, ಪ್ರಶಸ್ತಿ ಪ್ರದಾನ

malla
Published on

ಕಾಸರಗೋಡು: ಶ್ರೀ ವೆಂಟಕ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಯಕ್ಷೋತ್ಸವ ಕಾರ್ಯಕ್ರಮ ಅ.6ರಂದು ಮಧ್ಯಾಹ್ನ 2.30ಕ್ಕೆ ಶ್ರೀ ಪೇಟೆ ವೆಂಕಟ್ರಮಣ ಕ್ಷೇತ್ರ ವಠಾರದಲ್ಲಿ ನಡೆಯಲಿದೆ.

ಯಕ್ಷಗಾನದ ಪ್ರಸಿದ್ಧ ಸ್ತ್ರೀ ವೇಷಧಾರಿ ಮಲ್ಲಭಾಸ್ಕರ ಅವರು ಕಾಸರಗೋಡು ಯಕ್ಷೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸಭಾಕಾರ್ಯಕ್ರಮದಲ್ಲಿ ಪ್ರಶಸ್ತಿಪ್ರದಾನ ನಡೆಯುವುದು. ನಂತರ ನಾಟ್ಯಗುರು ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ ಕೇಂದ್ರದ ವಿದ್ಯಾರ್ಥಿಗಳಿಂದ ’ಹರೇ ರಾಮ-ಹರೇ ಕೃಷ್ಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net