

ಬೆಳ್ತಂಗಡಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಗೇರುಕಟ್ಟೆಯ ಯಕ್ಷಾರಾಧನಾ ಕಲಾ ಪ್ರತಿಷ್ಠ್ಠಾನ ನಾಳ ಸಹಯೋಗದಲ್ಲಿ ನ.9ರಂದು ಶ್ರೀ ಗಣೇಶೋತ್ಸವ ಸಭಾಭವನ ಗೇರುಕಟ್ಟೆಯಲ್ಲಿ ಯಕ್ಷೋತ್ಸವ ನಡೆಯಲಿದೆ. ಬೆಳಗ್ಗೆ 11ಕ್ಕೆ ಶ್ರೀ ಕ್ಷೇತ್ರ ನಾಳದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಉದ್ಘಾಟಿಸಲಿದ್ದು, ಕಳಿಯ ಗ್ರಾಪಂ ಮಾಜಿ ಅಧ್ಯಕ್ಷ ದಿವಾಕರ ಎಂ., ಗೇರುಕಟ್ಟೆ ಜ್ಯೋತಿ ಕ್ಲೀನಿಕ್ನ ಡಾ.ಅನಂತ್ ಭಟ್, ನಿವೃತ್ತ ರೈಲ್ವೆ ಅಧಿಕಾರಿ ಕೃಷ್ಣ ಕೆ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11.30ರಿಂದ ಗಣೇಶ್ ಪುಂಜಾಲಕಟ್ಟೆ ಮತ್ತು ತಂಡದವರಿಂದ ಯಕ್ಷಭಜನೆ ನಡೆಯಲಿದ್ದು, ಮಧ್ಯಾಹ್ನ 1ರಿಂದ ಯಕ್ಷಗಾನ ಅಂದು-ಇಂದು, ನಾಳೆ ವಿಚಾರಗೋಷ್ಠಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ದಿವಾಕರ ಆಚಾರ್ಯ ಕೊರಂಜ ಹಾಗೂ ರಾಘವ ಮೆದಿನ ಭಾಗವಹಿಸಲಿದ್ದಾರೆ. ಅಪರಾಹ್ನ 2ರಿಂದ ಕಾವ್ಯಶ್ರೀ ಅಜೇರು ಭಾಗವತಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ, ಸಂಜೆ 5.30ರಿಂದ ತರಣಿ ಸೇನ ಕಾಳಗ ಮಕ್ಕಳ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸಂಜೆ 6.30ರಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದ್ದು, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು, ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣ ನಿವೃತ್ತ ಅಧಿಕಾರಿ ಭುಜಬಲಿ, ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಆರ್, ವೆನ್ಲಾಕ್ ಆಸ್ಪತ್ರೆ ಮುಖ್ಯಸ್ಥ ಸದಾಶಿವ ರಾವ್, ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪ್ಪಗಿರಿ, ಸುರೇಂದ್ರ ಕುಮಾರ್ ಜೈನ್ ಕಳಿಯಬೀಡು, ವಿನಯ್ ಪೆರಾಜೆ ಗೇರುಕಟ್ಟೆ ಉಪಸ್ಥಿತರಿರಲಿದ್ದಾರೆ.
ರಾತ್ರಿ 9.30ರಿಂದ ಮೇದಿನಿ ನಿರ್ಮಾಣ ಮತ್ತು ಮಹಿಷ ಮರ್ದಿನಿ- ಶಾಂಭವಿ ವಿಜಯ, ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.