

ಸುಳ್ಯ: ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗ, ಮುಂಬಯಿ ತುಳು-ಕನ್ನಡಿಗರ ಅಭಿಮಾನದ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 23ನೇ ವಾರ್ಷಿಕೋತ್ಸವ-ತ್ರಯೋವಿಂಶತಿ ಕಲಾ ಸಂಭ್ರಮದಲ್ಲಿ ತೆಂಕುತಿಟ್ಟು ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಅವರಿಗೆ ಸಾಧಕ ಯಕ್ಷರಕ್ಷಾ ಪ್ರಶಸ್ತಿ-2024 ನೀಡಿ ಗೌರವಿಸಲಾಯಿತು. ಸೆ.29ರಂದು ಮುಂಬಯಿಯ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಾನಂದ ಸಂಪಾಜೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.