ಬನಾರಿಯಲ್ಲಿ ಯಕ್ಷಗಾನ ತಾಳಮದ್ದಳೆ

talamaddale
Published on

ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆಯೊಂದಿಗೆ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತ ಗುರು ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ ’ಅತಿಕಾಯ ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ಮನೋಹರವಾಗಿ ಮೂಡಿಬಂತು.

ಭಾಗವತಿಕೆಯಲ್ಲಿ ಮೋಹನ ಮೆಣಸಿನಕಾನ ಮತ್ತು ನಿತೀಶ್ ಕುಮಾರ್ ಎಂಕಣ್ಣಮೂಲೆ, ಚೆಂಡೆಮದ್ದಳೆ ವಾದಕರಾಗಿ ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜ, ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಳ, ಸ್ಕಂದ ದಿವಾಣ, ಕಲ್ಲಡ್ಕ ಶಿವರಾಮ ಕಲ್ಲೂರಾಯ, ಬಿ. ಎಚ್ ವೆಂಕಪ್ಪ ಗೌಡ ಸಹಕರಿಸಿದರು.

ಅರ್ಥಧಾರಿಗಳಾಗಿ ಡಾ. ರಮಾನಂದ ಬನಾರಿ, ದಿವಾಣ ಶಿವಶಂಕರ ಭಟ್, ಡಾ. ಸೂರ್ಯನಾರಾಯಣ ಭಟ್ ಪುತ್ತೂರು, ವೆಂಕಟೇಶ್ ಕುಮಾರ್ ಉಳುವಾನ, ಕೀರಿಕ್ಕಾಡು ಗಣೇಶ್ ಶರ್ಮ, ಯಂ. ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ನಡುಬೈಲು, ಐತಪ್ಪ ಗೌಡ ಮುದಿಯಾರು, ರಾಮ ನಾಯ್ಕ ದೇಲಂಪಾಡಿ ಪಾತ್ರಗಳನ್ನು ನಿರ್ವಹಿಸಿದರು.

ಹಿರಿಯ ಯಕ್ಷಗಾನ ಕಲಾವಿದ ಬಾಲಕೃಷ್ಣ ಗೌಡ ದೇಲಂಪಾಡಿ, ಕಲಾರಾಧಕ ಗೋಪಾಲಯ್ಯ ಕೋಟಿಗದ್ದೆ, ಪದ್ಮಾನಾಭರಾವ್ ಮಯ್ಯಳ ಸಹಕರಿಸಿದರು. ನಂದ ಕಿಶೋರ ಬನಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net