

ಕೊಕ್ಕಡ: ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ನೆಕ್ಕರಡ್ಕದ ಅಂಬರಕಾಪು ಶ್ರೀ ವಿಠೋಬ ರಕುಮಾಯಿ ಸನ್ನಿಧಿಯಲ್ಲಿ ನೂತನ ದೇಗುಲಕ್ಕೆ ಸೋಮವಾರ ಶಿಲಾನ್ಯಾಸ ನಡೆಯಿತು.
ನೆಕ್ಕರಡ್ಕದಲ್ಲಿ ನೆಲೆಸಿರುವ ಗೋಖಲೆ-ಹೆಬ್ಬಾರ್ ವಂಶಸ್ಥರು ಮುನ್ನೂರು ವರ್ಷಗಳ ಹಿಂದೆ ಈ ದೇವಸ್ಥಾನ ಸ್ಥಾಪಿಸಿ, ಇಂದಿನವರೆಗೂ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ದೇವಸ್ಥಾನ ಶಿಥಿಲಾವಸ್ಥೆಗೆ ತಲುಪಿದ್ದು ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿದೆ.
ಸತ್ಯ ಭಟ್ ಬಜಗೋಳಿ ವಿಧಿವಿಧಾನ ನೆರವೇರಿಸಿದರು. ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಕೇಳ್ಕರ್, ನಿವೃತ್ತ ಶಿಕ್ಷಕ ಗೋವಿಂದ ದಾಮಲೆ, ಉದ್ಯಮಿ ಅನಿಲ್ ಕುಮಾರ್, ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಕಾಯಡ ಶ್ರೀಧರ ರಾವ್, ಅರಸಿನಮಕ್ಕಿ ಗ್ರಾಪಂ ಉಪಾಧ್ಯಕ್ಷ ಸುಧೀರ್ ಕುಮಾರ್, ಸ್ಥಳೀಯ ಮುಖಂಡರಾದ ಅಡ್ಕಾಡಿ ಧರ್ಮರಾಜ ಗೌಡ, ತಾಪಂ ಮಾಜಿ ಸದಸ್ಯ ವಾಮನ ತಾಮ್ಹಣ್ಕರ್, ಗೋಖಲೆ-ಹೆಬ್ಬಾರ್ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.