

ಕುಂಬಳೆ: ಕುಂಬಳೆಗೆ ಸಮೀಪದ ಆಚೆಗೋಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಚೆಗೋಳಿ ಪಾರ್ಥಸಾರಥಿ ದೇವ ಯಕ್ಷಗಾನ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರಿಂದ ಸಹಸ್ರ ಕವಚ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಭಾನುವಾರ ಜರುಗಿತು.
ಭಾಗವತರಾಗಿ ಕಂಬಾರು ಕೇಶವ ಭಟ್ಟ, ಲಕ್ಷ್ಮೀಶ ಬೇಂಗ್ರೋಡಿ, ಹಿಮ್ಮೇಳದಲ್ಲಿ ರಾಜೇಂದ್ರಪ್ರಸಾದ್ ಪುಂಡಿಕಾಯಿ, ಹರಿಪ್ರಸಾದ ಪೊಟ್ನೋಟ, ಪಾತ್ರವರ್ಗದಲ್ಲಿ ಉದಯಶಂಕರ ಭಟ್ ಮಜಲು, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಸದಾಶಿವ ಗಟ್ಟಿ ನಾಯ್ಕಪು, ಪ್ರತಾಪ ಕುಂಬಳೆ, ಶಿವಾನಂದ ಕುಂಬಳೆ, ಸದಾಶಿವ ಮುಳಿಯಡ್ಕ, ಗುರುಮೂರ್ತಿ ನಾಯ್ಕಪು ಭಾಗವಹಿಸಿದರು.
ಸಂಘದ ಅಧ್ಯಕ್ಷ ಅನಂತ ಗಟ್ಟಿ ಸಿದ್ದಿಬೈಲು ಸ್ವಾಗತಿಸಿದರು. ಕಾರ್ಯದರ್ಶಿ ನಾರಾಯಣ ಹೇರಳ ವಂದಿಸಿದರು. ಪದಾಧಿಕಾರಿಗಳಾದ ಸುಬ್ರಾಯ ಗಟ್ಟಿ ಮುಳಿಯಡ್ಕ, ಸುಂದರ ಗಟ್ಟಿ ಮುಳಿಯಡ್ಕ, ಗೋಪಾಲಕೃಷ್ಣ ಕಾರಂತ ಅನಂತಪುರ, ಶ್ರೀಧರ ಟೈಲರ್ ಮೊದಲಾದವರು ಸಹಕರಿಸಿದರು.