ಬದಿಯಡ್ಕದಲ್ಲಿ ಯಕ್ಷಗಾನ ತಾಳಮದ್ದಳೆ

New Project (4)
Published on

ಬದಿಯಡ್ಕ: ಡಾ.ಮಾಲಿನಿ ಸರಳಾಯ ಸಂಸ್ಮರಣೆ, ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಬದಿಯಡ್ಕ ಸೀತಾರಾಮ ಕಾಂಪ್ಲೆಕ್ಸ್, ಶಾಸ್ತ್ರೀಸ್ ಕಾಂಪೌಂಡ್‌ನಲ್ಲಿ ಭಾನುವಾರ ಜರುಗಿತು.

ಯಕ್ಷಾಂತರಂಗ ಪೆರ್ಲ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಡಾ.ಸತೀಶ ಪುಣಿಂಚತ್ತಾಯ ಪೆರ್ಲ, ಕವಿ ಉದನೇಶ್ವರ ಮೂಲಡ್ಕ, ಉಪ್ಲೇರಿ ವಾಂತಿಚ್ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿ ಪ್ರಧಾನ ಕರ್ಮಿ ಗೋಪಾಲಕೃಷ್ಣ ವಾಂತಿಚ್ಚಾಲು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸಿದರು. ಮೂಲಡ್ಕ ನಾರಾಯಣ ಸ್ವಾಗತಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net