ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಯಕ್ಷಗಾನಕ್ಕೆ ಆದ್ಯತೆ ಇರಲಿ!

yakshagana 2
Published on

> ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು

ಮೂಡಲಪಾಯವೂ ಸೇರಿ ವಿಶಾಲ ವ್ಯಾಪ್ತಿ ಹಾಗೂ ವಿವಿಧ ಪ್ರಕಾರಗಳನ್ನು ಹೊಂದಿರುವ ಯಕ್ಷಗಾನ ವಲಯಕ್ಕೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯ ಸಂಖ್ಯೆ ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಸುಮಾರು 4&5 ದಶಕಗಳವರೆಗೆ ಒಂದೇ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಹಿರಿಯ ಕಲಾವಿದರನ್ನು ಯಕ್ಷಗಾನದಲ್ಲಿ ಕಾಣಬಹುದು. ಅಂತಹ ದಿಗ್ಗಜ ಕಲಾವಿದರಿಗೆ ವಿವಿಧ ಸಂಸ್ಥೆಗಳು, ಅಭಿಮಾನಿ ಬಳಗ ಹೀಗೆ ಸಾವಿರಾರು ಪ್ರಶಸ್ತಿಗಳು ಬರುತ್ತಿರುತ್ತವೆ. ಆದರೆ, ಅಂತಹ ಕಲಾವಿದರನ್ನು ಸರ್ಕಾರದ ಮಟ್ಟದಲ್ಲಿ ಗುರುತಿಸಿ ಮನ್ನಣೆ ನೀಡುವಾಗ ಈ ಪ್ರಶಸ್ತಿಗೆ ತೂಕ ಹೆಚ್ಚಿದೆ. ಆಯಾ ಕ್ಷೇತ್ರದಲ್ಲಿ ಅಕಾಡೆಮಿಗಳು ಈ ಕೆಲಸ ಮಾಡುತ್ತಿದ್ದರೂ ಪ್ರತಿವರ್ಷ ರಾಜ್ಯೋತ್ಸವ ಸಂದರ್ಭದಲ್ಲಿ ಲಭಿಸುವ "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ'ಯತ್ತ ಎಲ್ಲರೂ ಗಮನ ಹರಿಸುತ್ತಾರೆ.

ಕೆಲವು ವರ್ಷ ಯಕ್ಷಗಾನ ಕ್ಷೇತ್ರಕ್ಕೆ 4&6 ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿದ್ದುಂಟು. ಆದರೆ, ಹೆಚ್ಚಿನ ವರ್ಷಗಳಲ್ಲಿ 1&2 ಪ್ರಶಸ್ತಿಗಳಷ್ಟೇ ಯಕ್ಷಗಾನಕ್ಕೆ ಘೋಷಣೆಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ 2ಕ್ಕೆ ಸೀಮಿತವಾಗಿದೆ. ಆದ್ದರಿಂದಲೇ ಯಕ್ಷಗಾನ ವಲಯಕ್ಕೆ ನೀಡುವ ಪ್ರಶಸ್ತಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಕೂಗು ಹೆಚ್ಚಾಗುತ್ತಿದೆ.

ಹಿರಿಯ ಕಲಾವಿದರು ಅಧಿಕ: ಈಗಾಗಲೇ 4&5 ದಶಕಗಳಷ್ಟು ಕಾಲ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರ ಸಂಖ್ಯೆ ಯಕ್ಷಗಾನ ಕ್ಷೇತ್ರದಲ್ಲಿ ಅಧಿಕವಿದೆ. ಪ್ರತಿವರ್ಷ ನೀಡುವ ರಾಜ್ಯೋತ್ಸವ ಪ್ರಶಸ್ತಿಯ ಸಂಖ್ಯೆ ಕಡಿಮೆ ಇದ್ದರೆ, ಹಲವು ಅರ್ಹ ಹಿರಿಯ ಕಲಾವಿದರಿಗೆ ಪ್ರಶಸ್ತಿ ಕೈ ತಪು$್ಪವ ಸಾಧ್ಯತೆಗಳಿವೆ. ತುಂಬಾ ಕಲಾವಿದರಿಗೆ ಪ್ರಶಸ್ತಿ ಪಡೆಯುವ ಅವಕಾಶ ಲಭಿಸುವುದಿಲ್ಲ.

ಎಲ್ಲ ಪ್ರಕಾರಗಳಿಗೆ ಸೇರಿ ಒಂದು ಪ್ರಶಸ್ತಿ ಸರಿಯಲ್ಲ: ಕರಾವಳಿ ಭಾಗದಲ್ಲೇ ಯಕ್ಷಗಾನದ ಪ್ರಮುಖ ಎರಡು ತಿಟ್ಟುಗಳಿದ್ದು, ತೆಂಕು&ಬಡಗು ಉಭಯ ತಿಟ್ಟುಗಳಲ್ಲಿ ಯಕ್ಷಗಾನವನ್ನೇ ಜೀವನೋಪಾಯವಾಗಿಸಿರುವ ಸಾಕಷ್ಟು ವೃತ್ತಿಪರ ಕಲಾವಿದರು ಇದ್ದಾರೆ. ಲಾಂತರ ಯಕ್ಷಗಾನ ಅಭಿಮಾನಿ ಬಳಗ, ಸಾವಿರಾರು ಸಂಟಕರು ಹೀಗೆ ಯಕ್ಷಗಾನದ ವ್ಯಾಪ್ತಿ ಈ ಎರಡು ಪ್ರಕಾರಗಳಲ್ಲಿ ದೊಡ್ಡದಿದೆ. ಮತ್ತೆ ದೊಡ್ಡಾಟ, ಬಯಲಾಟ ಹೀಗೆ ಸಂಬಂಧಪಡುವ ಎಲ್ಲ ಪ್ರಕಾರಗಳನ್ನು ಒಂದು ಗುಂಪು ಮಾಡಿ 1&2 ಪ್ರಶಸ್ತಿ ಆಯ್ಕೆ ಮಾಡುವುದು ಸರಿಯಲ್ಲ ಎಂಬುದು ಕಲಾವಿದರ ಆಕ್ಷೇಪ. ಅಲ್ಲದೆ, ಒಂದು ಪ್ರಕಾರದಲ್ಲಿಯೂ ಹಿಮ್ಮೇಳ, ಮುಮ್ಮೇಳ ಹೀಗೆ ಕಲಾವಿದರಲ್ಲೂ ವಿವಿಧ ವಿಭಾಗಗಳಿವೆ ಎಂಬುದು ಗಮನಾರ್ಹ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ವೇಳೆ ಯಕ್ಷಗಾನ ಕ್ಷೇತ್ರಕ್ಕೆ ಪ್ರಶಸ್ತಿಗಳ ಸಂಖ್ಯೆ ಹೆಚ್ಚಿಸುವ ಮೂಲಕ ಆದ್ಯತೆ ನೀಡಬೇಕೆಂಬುದು ಯಕ್ಷಗಾನಪ್ರಿಯರ ಆಗ್ರಹ.

ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸಾಕಷ್ಟು ಹಿರಿಯ ಕಲಾವಿದರಿದ್ದಾರೆ. ಪ್ರತಿವರ್ಷ ಕನಿಷ್ಟ 4&5 ಪ್ರಶಸ್ತಿ ಕೊಡದೆ ಹೋದರೆ, ಅರ್ಹ ಕಲಾವಿದರಿಗೆ ಪ್ರಶಸ್ತಿ ಕೈ ತಪು$್ಪವ ಸಾಧ್ಯತೆಗಳು ಅಧಿಕವಾಗಿದೆ. ಅನೇಕ ವಯಸ್ಸಾದ ಕಲಾವಿದರು ಇರುವುದರಿಂದ ಪ್ರಶಸ್ತಿಗಳ ಸಂಖ್ಯೆ ಹೆಚ್ಚಾಗ ಬೇಕಿರುವುದು, ಯಕ್ಷಗಾನಕ್ಕೆ ಆದ್ಯತೆ ನೀಡಬೇಕಿರುವುದು ಅನಿವಾರ್ಯವಾಗಿದೆ. ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸಗಳು ನಡೆಯಬೇಕು. ಯಕ್ಷಗಾನ ಅಕಾಡೆಮಿ ಗಮನ ಹರಿಸಬೇಕು. > ಗೋಡೆ ನಾರಾಯಣ ಹೆಗಡೆ, ಹಿರಿಯ ಯಕ್ಷಗಾನ ಕಲಾವಿದ (ರಾಜ್ಯೋತ್ಸವ ಪ್ರಶಸ್ತಿ ಪುರಸತರು) ಸಾಧನೆ ಮಾಡಿದವರಿಗೆ ಆಯಾ ಕ್ಷೇತ್ರಗಳಲ್ಲಿ ಪ್ರಶಸ್ತಿಗಳು ಲಭಿಸುತ್ತಿರುತ್ತದೆ. ಅದರೆ, ರಾಜ್ಯೋತ್ಸವ ಪ್ರಶಸ್ತಿಯೂ ವಿಭಿನ್ನವಾಗಿದ್ದು, ಯಕ್ಷಗಾನಕ್ಕೆ ಆದ್ಯತೆ ಸಿಗಬೇಕಿದೆ. ಬಿಜೆಪಿ ಸರ್ಕಾರ ಇದ್ದಾಗ 4ಕ್ಕಿಂತ ಹೆಚ್ಚು ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿಗಳ ಸಂಖ್ಯೆ ಎಷ್ಟಾದರೂ ಅದು, ಪಾರದರ್ಶಕವಾಗಿ ಅರ್ಹ ಕಲಾವಿದರ ಪಾಲಾಗಬೇಕು. ಆಯಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮಾತ್ರವಲ್ಲ, ಅವರು ಕ್ಷೇತ್ರದ ಅಭಿವೃದ್ಧಿಗೆ ಹಾಗೆ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಮಾನದಂಡವಾಗಿ ಇರಿಸಿದರೆ ಒಳ್ಳೆಯದು. ಇದರಿಂದ ಮುಂದಿನ ಪೀಳಿಗೆಗೆ ಸಮಾಜಮುಖಿಯಾಗಿ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ. > ಸರಪಾಡಿ ಅಶೋಕ್​ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ (ರಾಜ್ಯೋತ್ಸವ ಪ್ರಶಸ್ತಿ ಪುರಸತರು) ಜಾನಪದ, ಸಂಗೀತ, ನಾಟಕ ಹೀಗೆ ಹಲವು ಕ್ಷೇತ್ರಗಳಿಗೆ 6&8 ಪ್ರಶಸ್ತಿಗಳು ಹೋಗುತ್ತದೆ. ಆದರೆ, ಕರ್ನಾಟಕದ ಗಂಡುಕಲೆ ಎಂದು ಎನಿಸಿಕೊಂಡ, ಸಾಂಪ್ರದಾಯಕ ಕಲೆ ಯಕ್ಷಗಾನಕ್ಕೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಪ್ರಾಶಸ ಸಿಗಬೇಕು. ಈ ಕಲೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ, ದೇಶ&ವಿದೇಶಗಳನ್ನು ಹೆಸರು ಮಾಡುತ್ತಿದೆ. ನಮ್ಮ ನಾಡಿನ ಸಂಸತಿ ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನ ಕ್ಷೇತ್ರ ಕೊಡುಗೆ ಮಹತ್ತರವಾಗಿದೆ. > ಸುರೇಶ ಹೆಗಡೆ ಕಡತೋಕ, ಯಕ್ಷಗಾನ ಸಂಟಕರು ಕೋಟ್​ ಕಳೆದ ಬಾರಿ ಸರ್ಕಾರ 69 ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿತ್ತು. ಈ ಬಾರಿ 70 ನೀಡಲಿದ್ದಾರೆ. ಎಲ್ಲ ಜಿಲ್ಲೆಗೆ ಒಂದು ಪ್ರಶಸ್ತಿಯಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದಲೇ ಇತಿಮಿತಿಗಳೊಂದಿಗೆ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತದೆ. ಯಕ್ಷಗಾನ ಕ್ಷೇತ್ರಕ್ಕೂ ಪ್ರಶಸ್ತಿಗಳು ಲಭಿಸಲಿದೆ. > ತಲ್ಲೂರು ಶಿವರಾಮ ಶೆಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕೋಟ್​ ಯಕ್ಷಗಾನ ಕೇವಲ ಮನರಂಜನೆಯ ಕಲೆಯಲ್ಲ. ಮನೋವಿಕಾಸದ ಕಲೆ. ಅಲ್ಲದೆ, ಕನ್ನಡವನ್ನು ಉಳಿಸಿ ಬೆಳೆಸುವ ಕಲೆಗಳಲ್ಲಿ ಪ್ರಮುಖವಾದ ಕಲೆಯಾದೆ. ಅದೆಷ್ಟೋ ಸಾಹಿತಿಗಳು, ರಾಜಕೀಯ ನಾಯಕರು ಹಾಗೆ ಗಣ್ಯ ಮಾನ್ಯರು ಮೆಚ್ಚಿದ ಯಕ್ಷಗಾನ ಕ್ಷೇತ್ರದಲ್ಲಿ 40&50 ವರ್ಷ ಕಸುಬು ನಡೆಸಿದ ಹಿರಿಯ ಕಲಾವಿದರು ತುಂಬಾ ಮಂದಿ ಇದ್ದಾರೆ. ಕೆಲವರು ಮೃತಪಟ್ಟಿದ್ದಾರೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯ ಸಂಖ್ಯೆಯನ್ನು ಯಕ್ಷಗಾನಕ್ಕೆಂದೇ 6&7 ಮೀಸಲಿಡಬೇಕು. ಸಮರ್ಥರಿಗೆ ಪ್ರಶಸ್ತಿ ದೊರೆಯಬೇಕು. ಅಲ್ಲದೆ, ಮರಣೋತ್ತರ ಪ್ರಶಸ್ತಿಗಳನ್ನು ನೀಡುವ ವ್ಯವಸ್ಥೆ ಸರ್ಕಾರ ಮಾಡಬೇಕು. ರಾಜ್ಯೋತ್ಸವದ ಸಾಂಸತಿಕ ಕಾರ್ಯಕ್ರಮದ ಜತೆ ಕನಿಷ್ಠ ಅರ್ಧ ಅಥವಾ ಒಂದು ಗಂಟೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಬೇಕು. > ಬಾಳ್ಕೂರು ಕೃಷ್ಣ ಯಾಜಿ, ಹಿರಿಯ ಯಕ್ಷಗಾನ ಕಲಾವಿದರು (ರಾಜ್ಯೋತ್ಸವ ಪ್ರಶಸ್ತಿ ಪುರಸತರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net