

ಬೆಂಗಳೂರು: ಹಲಸೂರಿನ ರಂಗಸ್ಥಳ ಮಿತ್ರಕೂಟದಿಂದ "ರಜತ ಪರ್ವ-2025'ಕಾರ್ಯಕ್ರಮವನ್ನು ಜು.19 ಮತ್ತು 20ರಂದು ಹಮ್ಮಿಕೊಳ್ಳಲಾಗಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. 19ರಂದು ಉದ್ಘಾಟನಾ ಕಾರ್ಯಕ್ರಮ, ವಿಚಾರ ಸಂಕಿರಣ ಹಾಗೂ ನಡುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದಿಂದ "ರಾಜಾ ರುದ್ರಕೋಪ' ಯಕ್ಷಗಾನ ಬಯಲಾಟ ನಡೆಯಲಿದೆ.
20 ರಂದು ಶ್ರೀ ವಿಷ್ಟು ಸಹಸ್ರನಾಮ ಹೋಮ, ಯಕ್ಷಗಾನ ಪ್ರದರ್ಶನಗಳು ಹಾಗೂ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮತ್ತು ನೆರವು ಕಾರ್ಯಕ್ರಮಗಳು ನಡೆಯಲಿದೆ.
ಪ್ರಶಸ್ತಿಗೆ ಆಯ್ಕೆ: ಯಕ್ಷಗಾನ ಭಾಗವತ ಕೆ.ಪಿ.ಹೆಗಡೆ ಗೋಳಗೋಡು, ಮುಮ್ಮೇಳ ಕಲಾವಿದ ಹೆರಿಯ ಮೊಗವೀರ ಮೊಗೆಬೆಟ್ಟು ಅವರು ರಂಗಸ್ಥಳ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕಲಾವಿದರಾದ ಕಕ್ಕುಂಜೆ ಗೋಪಾಲ ಬಳೆಗಾರ, ಕೋಡಿ ವಿಶ್ವನಾಥ ಗಾಣಿಗರು, ನಾಗೇಶ ಭಂಡಾರಿ ಕರ್ವ, ಮಾರಣಕಟ್ಟೆ ಆರಾಯಣ ನಾಯ್ಕ ಅವರು ದತ್ತಿನಿಧಿ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.