

ಬೆಂಗಳೂರು: ಯಕ್ಷಗಾನದ ಪರಂಪರೆ, ಮಟ್ಟು&ತಿಟ್ಟುಗಳು ಉಳಿಯಬೇಕಾದರೆ ಹವ್ಯಾಸಿ ಕಲಾವಿದರೇ ಪ್ರಮುಖ ಶಕ್ತಿಯಾಗಬೇಕು ಎಂದು ಯಕ್ಷಗಾನ ವಿದ್ವಾಂಸ ಡಾ.ಆನಂದರಾಮ ಉಪಾಧ್ಯ ಅಭಿಪ್ರಾಯಪಟ್ಟರು.
ನಗರದ ಯಕ್ಷಸಿಂಚನ ಟ್ರಸ್ಟ್ನ 16ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯಕ್ಷಗಾನವು ಕೇವಲ ಕರಾವಳಿಯ ಕಲೆಯಲ್ಲ, ಇಡೀ ನಾಡಿನ ಕಲೆಯಾಗಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಪತ್ರಕರ್ತ ಸುಧೀಂದ್ರ ಭಾರದ್ವಾಜ್ ಮಾತನಾಡಿ, ನಗರದ ಸಾಂಸತಿಕ ವಾತಾವರಣದಲ್ಲಿ ಯಕ್ಷಗಾನವನ್ನು ಬೆಳೆಸುತ್ತಿರುವ ಯಕ್ಷಸಿಂಚನ ತಂಡದ ಪರಿಶ್ರಮ ಶ್ಲಾಘನೀಯ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಯಕ್ಷಗುರು ಹಾಗೂ ಹಿಮ್ಮೇಳ ವಾದಕ ಚೇರ್ಕಾಡಿ ಮಂಜುನಾಥ ಪ್ರಭು ಅವರಿಗೆ ಅವರ ನಾಲ್ಕು ದಶಕಗಳ ಯಕ್ಷಗಾನ ಸೇವೆಗಾಗಿ "ಸಾರ್ಥಕ ಸಾಧಕ ಗೌರವ ಪ್ರಶಸಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಮೊದಲ ಭಾಗದಲ್ಲಿ ಯಕ್ಷಕಲಾ ಅಕಾಡೆಮಿ, ಬೆಂಗಳೂರು ಇದರ ಬಾಲ ಕಲಾವಿದರು 'ರಾಮ&ಪರಶುರಾಮ' ಪ್ರಸಂಗವನ್ನು ಪ್ರಸ್ತುತಪಡಿಸಿದರು. ನಂತರ ಯಕ್ಷಸಿಂಚನ ತಂಡದ ಕಲಾವಿದರು "ತರಣಿಸೇನ' ಪ್ರಸಂಗವನ್ನು ಪ್ರದರ್ಶಿಸಿದರು.
ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ ತುಂಗ, ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ ಮತ್ತಿತರರು ಇದ್ದರು.