

ಕೋಟ: ಇತ್ತೀಚೆಗೆ ಬೆಂಗಳೂರು ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ಕನ್ನಡಪರ್ವ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಪ್ರಿಯಾಂಕ ಕೆ.ಮೋಹನ್ ನಿರ್ದೇಶನದಲ್ಲಿ ಯಕ್ಷದೇಗುಲ ಮಕ್ಕಳ ತಂಡದಿಂದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಿತು.
ಭಾಗವತರಾಗಿ ಲಂಬೋದರ ಹೆಗಡೆ, ಮದ್ದಳೆಯಲ್ಲಿ ಸಂಪತ್ಕುಮಾರ್, ಚೆಂಡೆಯಲ್ಲಿ ಪನ್ನಗ ಮಯ್ಯ ಸಹಕರಿಸಿದ್ದರು. ಧರ್ಮರಾಯನಾಗಿ ಸರಸ್ವತಿ, ಅಭಿಮನ್ಯುವಾಗಿ ತೇಜಸ್, ಸುಭದ್ರೆ ಪಾತ್ರದಲ್ಲಿ ಅನೀಶ, ಸೈಂಧವನಾಗಿ ಮಹೇಶ್ವರ, ಕೌರವ ಪಾತ್ರದಲ್ಲಿ ಧನ್ಯ, ದ್ರೋಣನಾಗಿ ಶಾಶ್ವತ್, ಕರ್ಣನಾಗಿ ಸುಹಾಸ್, ಶಲ್ಯ ಪಾತ್ರದಲ್ಲಿ ಕ್ರಿಶ, ದುಶ್ಯಾಸನನಾಗಿ ಅಹನ, 2ನೇ ಅಭಿಮನ್ಯು ಪಾತ್ರದಲ್ಲಿ ಅನಿಕ ಭಾಗವಹಿಸಿದರು. ಬಾಲಕೃಷ್ಣ ಭಟ್, ಸುದರ್ಶನ ಉರಾಳ, ಉದಯ ಬೋವಿ ಮತ್ತು ವಿಶ್ವನಾಥ ಉರಾಳ್ ಸಹಕರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಹೆರಂಜಾಲು ಸುಬ್ಬಣ್ಣ ಗಾಣಿಗ ಅವರನ್ನು ಗೌರವಿಸಲಾಯಿತು.