

ವಿಜಯವಾಣಿ ಸುದ್ದಿಜಾಲ ಕಾರ್ಕಳ
ನಿಟ್ಟೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ವಾರ್ಷಿಕ ಮಹಾಸಭೆ ಸಮಿತಿ ಅಧ್ಯಕ್ಷ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ವಿಶ್ವಕರ್ಮ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಆಚಾರ್ಯ, ಉಪಾಧ್ಯಕ್ಷ ಈಶ್ವರ್ ಬಡಿಗೇರ, ಕಾರ್ಯದರ್ಶಿ ಶ್ರೀಧರ್ ಆಚಾರ್ಯ ಕೆಮ್ಮಣ್ಣು, ದಿವಾಕರ ಆಚಾರ್ಯ ಕೆಮ್ಮಣ್ಣು, ಕೋಶಾಧಿಕಾರಿ ಜಯಾನಂದ ಆಚಾರ್ಯ ನಿಟ್ಟೆ ಹಾಗೂ ಮಹಿಳಾ ಸಮಿತಿ ಅಧ್ಯಕ್ಷೆ ವತ್ಸಲಾ ಉಮೇಶ್ ಆಚಾರ್ಯ ನಿಟ್ಟೆ, ಪದಾಧಿಕಾರಿಗಳಾದ ಉದಯ ಸುಧಾಕರ ಆಚಾರ್ಯ, ವೀಣಾ ದಿವಾಕರ ಆಚಾರ್ಯ, ಸುಮಿತ್ರಾ ಲಕ್ಷ್ಮಣ ಆಚಾರ್ಯ, ಆಶಾ ಜಯಾನಂದ ಆಚಾರ್ಯ, ಮೂರೂ ಸಮಿತಿ ಸದಸ್ಯರು ಇದ್ದರು.
ಇದೇ ವೇಳೆ ನಿಟ್ಟೆ ಸಂಘದ ಉಪ ಸಮಿತಿಯಾದ ವಿಶ್ವಕರ್ಮ ಯುವ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಪ್ರದೀಪ್ ಆಚಾರ್ಯ ಪರಪ್ಪಾಡಿ ಆಯ್ಕೆಯಾದರು. ಕಾರ್ಯದರ್ಶಿ-ಪ್ರದೀಪ್ ಆಚಾರ್ಯ, ಉಪಾಧ್ಯಕ್ಷ-ಸುಧೀರ್ ಆಚಾರ್ಯ ಕಲ್ಯಾ, ಜತೆ ಕಾರ್ಯದರ್ಶಿ-ಪ್ರವೀಣ್ ಆಚಾರ್ಯ ಕಲ್ಯಾ ಹಾಗೂ ನಾಗರಾಜ್ ಆಚಾರ್ಯ ಕಲ್ಯಾ, ಕೋಶಾಧಿಕಾರಿ-ಪ್ರಸಾದ್ ಆಚಾರ್ಯ ಬರಂಗ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರವೀಣ್ ಆಚಾರ್ಯ ಪರಪಾಡಿ, ಉಮೇಶ್ ಆಚಾರ್ಯ ಪರಪಾಡಿ, ಮುರಳಿಧರ್ ಆಚಾರ್ಯ ತಾನದಗುಡ್ಡೆ, ಸತೀಶ್ ಆಚಾರ್ಯ ಕಲ್ಯಾ, ನಿತೀನ್ ಆಚಾರ್ಯ ಕೆಮ್ಮಣ್ಣು, ನಾಗೇಶ್ ಆಚಾರ್ಯ ಕಲ್ಯಾ, ಸಾಥ್ವಿಕ್ ಆಚಾರ್ಯ ನಿಟ್ಟೆ, ಹೃತಿಕ್ ಆಚಾರ್ಯ ದೂಪದಕಟ್ಟೆ, ಗುರುಪ್ರಸಾದ್ ಆಚಾರ್ಯ ಜೊಗಲ್ಬೆಟ್ಟು, ಅನೂಪ್ ಆಚಾರ್ಯ ನಿಟ್ಟೆ, ಶ್ರೀಕಾಂತ ಆಚಾರ್ಯ ಕೆಮ್ಮಣ್ಣು ಆಯ್ಕೆಯಾದರು.