ಕಲಾವಿದರು ಇತರರ ಬದುಕಿಗೆ ಪ್ರೇರಣಾಶಕ್ತಿ : ರಾಮಕೃಷ್ಣ ಮಯ್ಯ ಅನಿಸಿಕೆ

New Project (10)
Published on

ಸುಬ್ರಹ್ಮಣ್ಯ: ಕಲೆಯು ಕೇವಲ ಮನೋರಂಜನೆ ಮಾತ್ರವಲ್ಲ ಬದಲಾಗಿ ಅದು ಜೀವನಕ್ಕೆ ಸಂಸ್ಕಾರ, ಸಂಸ್ಕೃತಿಯನ್ನು ಬೋಧಿಸುತ್ತದೆ. ಕಲೆ ಹಾಗೂ ಕಲಾವಿದರು ಇತರರ ಬದುಕಿಗೆ ಪ್ರೇರಣಾ ಶಕ್ತಿಗಳು ಎಂದು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಸಂಚಾಲಕ ರಾಮಕೃಷ್ಣ ಮಯ್ಯ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯದ ರಥಬೀದಿ ನೂತನ ಸಭಾಗೃಹದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಯಕ್ಷಮಿತ್ರರು ಬಳಗ ಕುಕ್ಕೆ ಸುಬ್ರಹ್ಮಣ್ಯ ಸೋಮವಾರ ಆಯೋಜಿಸಿದ ಯಕ್ಷಗಾನ ಬಯಲಾಟ ಸಂದರ್ಭ ಗೌರವಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು.

ಕಲಾಸಂಘಟಕ ಯಜ್ಞೇಶ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯದ ಯಕ್ಷಮಿತ್ರರು ಬಳಗದ ಸಂಚಾಲಕ ಶಂಭಯ್ಯ ಕಂಜರ್ಪಣೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪುರೋಹಿತ ಸರ್ವೇಶ್ವರ ಭಟ್, ಕಲಾವಿದ ಲಕ್ಷ್ಮಣ ಕುಮಾರ್ ಮರಕಡ ಮೊದಲಾದವರಿದ್ದರು. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ನಿರೂಸಿದರು.

ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳಗ್ಗೆ ಚಿಂತನಾಗೋಷ್ಠಿ ನಡೆಯಿತು. ಬಳಿಕ ಶ್ರೀದೇವಿ ಮಹಾತ್ಮ್ಯೆ ಯಕ್ಷಗಾನ ಪ್ರದರ್ಶನ ನಡೆಯಿತು.

\https://www.vijayavani.net/mundur-gram-panchayat-general-assembly

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net