ಯಕ್ಷಗಾನ ನಾಟ್ಯ, ಹಿಮ್ಮೇಳ ತರಬೇತಿಗೆ ಚಾಲನೆ

yakshagana
ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಯಕ್ಷಗಾನ ನಾಟ್ಯ, ಹಿಮ್ಮೇಳ ತರಗತಿಯನ್ನು ಕಲಾವಿದ ರಾಧಾಕೃಷ್ಣ ನಾವಡ ಮಧೂರು ಉದ್ಘಾಟಿಸಿದರು. ತರಬೇತಿ ಕೇಂದ್ರದ ಅಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ ಮತ್ತಿತರರಿದ್ದರು.
Published on

ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಈ ವರ್ಷದ ನಾಟ್ಯ ತರಬೇತಿ ತರಗತಿ ಮತ್ತು ಹೊಸದಾಗಿ ಯಕ್ಷಗಾನ ಹಿಮ್ಮೇಳ ತರಗತಿಗೆ ಚಾಲನೆ ನೀಡಲಾಯಿತು. ಯಕ್ಷರಂಗದ ಖ್ಯಾತ ಕಲಾವಿದ ರಾಧಾಕೃಷ್ಣ ನಾವಡ ಮಧೂರು ದೀಪ ಬೆಳಗಿಸಿ ತರಬೇತಿ ಉದ್ಘಾಟಿಸಿದರು.

ತರಬೇತಿ ಕೇಂದ್ರದ ಅಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಹಿಮ್ಮೇಳ ಗುರುಗಳಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಘವ ಬಲ್ಲಾಳ್ ಕಾರಡ್ಕ, ನಾಟ್ಯಗುರುಗಳಾದ ರಾಕೇಶ್ ರೈ ಅಡ್ಕ, ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಕಲಾ ಸಂಘದ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ರಾಮಕೃಷ್ಣ ಹೊಳ್ಳ ಸ್ವಾಗತಿಸಿ ಕಿಶೋರ್ ಕುಮಾರ್ ವಂದಿಸಿದರು. ನಾಟ್ಯ ತರಬೇತಿ ಉಚಿತವಾಗಿ ನೀಡುತ್ತಿದ್ದು ಹಿಮ್ಮೇಳ ತರಗತಿಗೆ ಸಣ್ಣ ಶುಲ್ಕವನ್ನಿರಿಸಿ ತರಬೇತಿ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net