ಯಕ್ಷಗಾನ ಸ್ತ್ರೀವೇಷಧಾರಿ ಮೂರೂರು ವಿಷ್ಣು ಭಟ್‌ ನಿಧನ

Vishnu-Bhat
Published on

ಸಿದ್ದಾಪುರ:ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಮೂರೂರು ವಿಷ್ಣುಭಟ್(65) ಉತ್ತರ ಕನ್ನಡದ ಸಿದ್ದಾಪುರದಲ್ಲಿ ಭಾನುವಾರ ನಿಧನ ಹೊಂದಿದರು.

ನಾಲ್ಕು ದಶಕಗಳ ಕಾಲ ಬಡಗುತಿಟ್ಟಿನ ವಿವಿಧ ಮೇಳಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸಿದ್ಧರಾಗಿದ್ದರು. ಮೃತರಿಗೆ ಪತ್ರಿ, ಪುತ್ರ, ಬಂಧುಗಳು ಅಪಾರ ಅಭಿಮಾನಿಗಳಿದ್ದಾರೆ.

ಗುಂಡುಬಾಳ,ಅಮೃತೇಶ್ವರೀ,ಹಿರೇಮಹಾಲಿಂಗೆಶ್ವರ,ಶಿರಸಿ,ಪೆರ್ಡೂರು,ಮಂದಾರ್ತಿ,ಸಾಲಿಗ್ರಾಮ,ಪೂರ್ಣಚಂದ್ರ ಮೇಳಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು. ದಮಯಂತಿ,ಚಂದ್ರಮತಿ, ಸೀತೆ,ಅಂಬೆ,ಮೊದಲಾದ ಪೌರಾಣಿಕ ಪಾತ್ರಗಳಿಗೆ ತಮ್ಮ ಭಾವಪೂರ್ಣ ಅಭಿಯನ, ಮಾತುಗಾರಿಕೆಯಿಂದ ಜೀವ ತುಂಬಿದ್ದರು.

ಯಕ್ಷಗಾನ ಕಲಾರಂಗ ಪ್ರಶಸ್ತಿ,,ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕರಗಳಿಗೆ ಭಾಜನರಾಗಿದ್ದರು. ಅವರ ನಿಧನಕ್ಕೆ ಯಕ್ಷಗಾನ ಕ್ಷೇತ್ರದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net