ಯಕ್ಷಗಾನ ಧಾರ್ಮಿಕ ಮನೋಭಾವ ಬೆಳೆಸುವ ಕಲೆ

kalakendra
ಇತ್ತೀಚಿಗೆ ಹಂಗಾರಕಟ್ಟೆ ಗುಂಡ್ಮಿ ಯಕ್ಷಗಾನ ಕಲಾಕೇಂದ್ರದಲ್ಲಿ ಇತ್ತೀಚೆಗೆ ಯಕ್ಷ ಸಂಭ್ರಮದಲ್ಲಿ ಸಾಲಿಗ್ರಾಮ ದೇವಸ್ಥಾನದ ಟ್ರಸ್ಟಿ ಗುಂಡ್ಮಿ ಚಂದ್ರಶೇಖರ ಉಪಾಧ್ಯ ಮಾತನಾಡಿದರು.
Published on

ಕೋಟ: ದೇವತಾರಾಧನೆಯ ಮೂಲ ಉದ್ದೇಶವನಿಟ್ಟುಕೊಂಡು ಹುಟ್ಟಿದ ಕಲೆ ಯಕ್ಷಗಾನ. ಕಾಳಗ, ಕಲ್ಯಾಣ ಯಾವ ಪ್ರಸಂಗವಾದರೂ ಸುಸಂಸ್ಕೃತ ತತ್ವವನ್ನು ಪ್ರತಿಪಾದಿಸುವ ಕಥೆಗಳನ್ನೊಳಗೊಂಡಿರುತ್ತದೆ ಎಂದು ಸಾಲಿಗ್ರಾಮ ದೇವಸ್ಥಾನದ ಟ್ರಸ್ಟಿ ಗುಂಡ್ಮಿ ಚಂದ್ರಶೇಖರ ಉಪಾಧ್ಯ ಹೇಳಿದರು.

ಹಂಗಾರಕಟ್ಟೆ ಗುಂಡ್ಮಿ ಯಕ್ಷಗಾನ ಕಲಾಕೇಂದ್ರದಲ್ಲಿ ಮಯ್ಯ ಯಕ್ಷ ಬಳಗ ಹಾಲಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯಕ್ಷ ಸಂಭ್ರಮದಲ್ಲಿ ಮಾತನಾಡಿದರು.

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ, ಮಯ್ಯ ಯಕ್ಷ ಬಳಗದ ರಾಘವೇಂದ್ರ ಮಯ್ಯ, ಕನ್ನಡ ಸಾಹಿತ್ಯ ಪರಿಷತ್‌ನ ರಾಮಚಂದ್ರ ಐತಾಳ, ನಿವೃತ್ತ ಮುಖ್ಯ ಶಿಕ್ಷಕ ಹರಿಕೃಷ್ಣ ಹೊಳ್ಳ ಉಪಸ್ಥಿತರಿದ್ದರು. ಬೇಳೂರು ವಿಷ್ಣುಮೂರ್ತಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ವೈಕುಂಠ ಹೇರ್ಳೆ ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net