

ಕಾರ್ಕಳ: ಬೋಳ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ ಕಟ್ಟಡಕ್ಕೆ ಗುರುವಾರ ಸಂಚಾಲಕ ಅಕ್ಷಯ ಅಡ್ಯಂತಾಯ ಮತ್ತು ಅಧ್ಯಕ್ಷ ಅಶೋಕ ಅಡ್ಯಂತಾಯ ಶಿಲಾನ್ಯಾಸ ನೆರವೇರಿಸಿದರು.
ರಾಜೇಶ್ ಭಟ್ ಕುಂಟಾಡಿ ಮತ್ತು ರಂಜಿತ್ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಅನುಷ್ಠಾನ ನೆರವೇರಿತು. ನಿವೃತ್ತ ಶಿಕ್ಷಕ ಜಗದೀಶ ಆಚಾರ್, ನಿವೃತ್ತ ಪ್ರಾಂಶುಪಾಲ ಪದ್ಮನಾಭ ಗೌಡ, ಕರುಣಾಕರ ಶೆಟ್ಟಿ, ಹಳೇ ವಿದ್ಯಾರ್ಥಿ ಬಿ.ಎಸ್.ಪ್ರಕಾಶ್ ಆಚಾರ್ಯ, ಸುದರ್ಶನ್ ಬಂಗೇರ, ಡೋಲ್ಫಿ ಡಿಮೆಲ್ಲೊ, ಪ್ರಶಾಂತ್ ದೇವಾಡಿಗ, ಜೋನ್ ಆಲ್ಫೋನ್ಸ್, ಉದಯ ಶೆಟ್ಟಿ, ಸಂಜೀವ ಶೆಟ್ಟಿ ಗುಡುಗಲ್ಲು, ಬೋಳ ಸುಧಾಕರ ಆಚಾರ್ಯ, ಜಯರಾಮ ಸಾಲಿಯಾನ್, ಮುಖ್ಯ ಶಿಕ್ಷಕಿ ಜಯಶ್ರೀ ಪ್ರಕಾಶ್, ಸುನೀಲ್ ದೇವಾಡಿಗ, ಸತೀಶ ಪ್ರಭು, ದಿನೇಶ್ ಆಚಾರ್, ಜಯರಾಮ ದೇವಾಡಿಗ, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.