

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹ ಸದಸ್ಯರನ್ನಾಗಿ ತುಮಕೂರಿನ ಮೂಡಲಪಾಯ ಯಕ್ಷಗಾನ ಭಾಗವತ ಎ.ಆರ್. ಪುಟ್ಟಸ್ವಾಮಿ, ಉಡುಪಿಯ ಯಕ್ಷಗಾನ ವಿದ್ವಾಂಸ ಎಸ್. ಕೆ. ಪೃಥ್ವಿ ರಾಜೇಶ್‌ಕುಮಾರ್ ಮತ್ತು ಉತ್ತರ ಕನ್ನಡದ ಯಕ್ಷಗಾನ ವಿದ್ವಾಂಸ ವಿದ್ಯಾಧರ ವೆಂಕಟೇಶ ಮಡಿವಾಳ ಅವರನ್ನು ಆಯ್ಕೆ ಮಾಡಲಾಗಿದೆ. ಈ ನೂತನ ಸಹ ಸದಸ್ಯರ ಅಧಿಕಾರವಧಿ ಮೂರು ವರ್ಷಗಳವರೆಗೆ ಇರಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ರಿಜಿಸ್ಟ್ರಾರ್ ಎನ್. ನಮ್ರತಾ ತಿಳಿಸಿದ್ದಾರೆ.