

ತುಮಕೂರು: ಯಕ್ಷದೀವಿಗೆ ಸಂಸ್ಥೆಯು ಏ.13 ಹಾಗೂ 14ರಂದು ನಗರದ ಕೆ.ಆರ್. ಬಡಾವಣೆಯ ಶ್ರೀಕೃಷ್ಣಮಂದಿರದಲ್ಲಿ ಎರಡು ದಿನಗಳ ಯಕ್ಷಗಾನ ನಾಟ್ಯ ತರಬೇತಿ ಕಮ್ಮಟವನ್ನು ಹಮ್ಮಿಕೊಂಡಿದೆ. ತೆಂಕುತಿಟ್ಟು ಯಕ್ಷಗಾನದ ವಿಶೇಷ ನಾಟ್ಯ ತರಬೇತಿಯನ್ನು ನೀಡಲಾಗುವುದು. ಯಕ್ಷಗಾನ ಕಲಾವಿದ ಸಕೇಶ ಆಚಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು.
ಯಕ್ಷದೀವಿಗೆಯ ವಾರಾಂತ್ಯದ ಯಕ್ಷಗಾನ ಹಿಮ್ಮೇಳ-ಮುಮ್ಮೇಳ ತರಗತಿಗಳನ್ನು ಕೂಡ 13ರಂದು ಆರಂಭಿಸಲಾಗುವುದು.
ಯಕ್ಷಗಾನದ ಅಭಿನಯ, ನಾಟ್ಯ, ಸಂಭಾಷಣೆ (ಮುಮ್ಮೇಳ) ಹಾಗೂ ಚೆಂಡೆ-ಮದ್ದಳೆ (ಹಿಮ್ಮೇಳ) ಇತ್ಯಾದಿಗಳಲ್ಲಿ ಪ್ರತೀ ಭಾನುವಾರ ತರಬೇತಿ ನೀಡಲಾಗುವುದು. ಹಿಮ್ಮೇಳ ತರಗತಿಗಳನ್ನು ಯಕ್ಷಗಾನ ಕಲಾವಿದರಾದ ಅವಿನಾಶ್ ಬೈಪಾಡಿತ್ತಾಯ ಹಾಗೂ ಮುಮ್ಮೇಳ ತರಗತಿಗಳನ್ನು ಆರತಿ ಪಟ್ರಮೆ ನಡೆಸಲಿದ್ದಾರೆ. 10 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರೂ ಈ ತರಗತಿಗಳಿಗೆ ಪ್ರವೇಶ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಮೊ: 9449974840 ಅಥವಾ 9449525854 ಸಂಪರ್ಕಿಸಬಹುದು.