ಯಕ್ಷ ಸ್ನೇಹ ಸಮ್ಮಿಲನ ಕಾರ್ಯಕ್ರಮ

yaksha
ಯಕ್ಷ ಸ್ನೇಹ ಸಮ್ಮಿಲನದಲ್ಲಿ ಕಲಾವಿದರಾದ ಮಹಾಬಲ ನಾಯ್ಕ ಬುಕ್ಕಿಗುಡ್ಡೆ, ರಘುನಾಥ ನಾಯಕ್ ಅವರನ್ನು ಸನ್ಮಾನಿಸಲಾಯಿತು.
Published on

ಹೆಬ್ರಿ: ದೊಂಡೇರಂಗಡಿ ಯಕ್ಷ ಮಿತ್ರರು ಆಯೋಜನೆಯ ಮೂರನೇ ವರ್ಷದ ಯಕ್ಷ ಸ್ನೇಹ ಸಮ್ಮಿಲನ ಭಾನುವಾರ ನಡೆಯಿತು.
ಯಕ್ಷಗಾನ ಕಲಾವಿದರಾದ ಮಹಾಬಲ ನಾಯ್ಕ ಬುಕ್ಕಿಗುಡ್ಡೆ, ರಘುನಾಥ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಕೃಷ್ಣ ಶೆಣೈ ದೊಂಡೇರಂಗಡಿ, ದಿನೇಶ್ ಶೆಟ್ಟಿ, ಪ್ರಕಾಶ್ ಕಿರಾಡಿ, ದಯಾನಂದ ಹೆಗ್ಡೆ, ಕರುಣಾಕರ ಶೆಟ್ಟಿ ಕಾವಾಡಿ, ಬಾಲಕೃಷ್ಣ ಆಚಾರ್ಯ ಮುನಿಯಾಲು ಉಪಸ್ಥಿತರಿದ್ದರು. ಅರುಣ್ ಶೆಟ್ಟಿ ಸ್ವಾಗತಿಸಿದರು. ವಿನಯ ಆರ್. ಭಟ್ ನಿರೂಪಿಸಿದರು. ಹವ್ಯಾಸಿ ಭಾಗವತರಿಂದ ಗಾನವೈಭವ ನಡೆಯಿತು. ಹವ್ಯಾಸಿ ಕಲಾವಿದರಿಂದ ವೀರ ವೃಷಸೇನ- ಕರ್ಣಾರ್ಜುನ ಕಾಳಗ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net