

ಕೋಟ: ಯಕ್ಷಗಾನ ಕ್ಷೇತ್ರಕ್ಕೆ ಹವ್ಯಾಸಿ ಯಕ್ಷ ಸಂಘಗಳ ಕೊಡುಗೆ ಅನನ್ಯ ಎಂದು ಕೋಟ ಅಮೃತೇಶ್ವರಿ ದೇಗುಲ ಪೂರ್ವಾಧ್ಯಕ್ಷ ಆನಂದ್ ಸಿ.ಕುಂದರ್ ನುಡಿದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ವಠಾರದಲ್ಲಿ ಕೋಟ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಆಶ್ರಯದಲ್ಲಿ ಯಕ್ಷ ಸಪ್ತಾಹ ಸೌರಭ ಸಪ್ತಮಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಹಕಾರಿ ಧುರೀಣ ಮಂಜುನಾಥ್ ಎಸ್.ಕೆ., ಯಕ್ಷಸೌರಭದ ಗೌರವ ಸಲಹೆಗಾರ ಟಿ.ಮಂಜುನಾಥ್ ಗಿಳಿಯಾರು, ಪತ್ರಕರ್ತರಾದ ಲಕ್ಷ್ಮೀ ಮಚ್ಚಿನ, ರವೀಂದ್ರ ಕೋಟ, ಯಕ್ಷ ಚಿಂತಕ ಹಂದಕುಂದ ಅಶೋಕ್ ಕುಮಾರ್ ಶೆಟ್ಟಿ, ಸಾಸ್ತಾನ ಗೋಳಿಗರಡಿ ದೈವಸ್ಥಾನ ಮೊಕ್ತೇಸರ ಜಿ.ವಿಠ್ಠಲ ಪೂಜಾರಿ, ಯಕ್ಷ ಸೌರಭ ಸ್ಥಾಪಾಕಾಧ್ಯಕ್ಷ ಹರೀಷ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಸೌರಭ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ಸ್ವಾಗತಿಸಿದರು. ಸೌರಭ ಸದಸ್ಯ ರಾಜೇಶ್ ಕರ್ಕೇರ ಕೋಡಿ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ್ ಉರಾಳ್ ವಂದಿಸಿದರು.
ಮತ್ಸೊೃೀದ್ಯಮಿ ಶ್ರೀನಿವಾಸ ತಿಂಗಳಾಯ ಅವರನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಅವರಿಗೆ ಸಪ್ತಾಹದ ಸೌರಭ ಸನ್ಮಾನ ನೀಡಲಾಯಿತು. ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಯಕ್ಷ ಪೋಷಕರಾದ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸಾಲಿಗ್ರಾಮ ದೇಗುಲ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಗೌರವ ಸ್ಮರಣಿಕೆ ನೀಡಲಾಯಿತು.