

ಬೆಳ್ತಂಗಡಿ: ಯಕ್ಷಧ್ರುವ ಪಟ್ಲ ಫೌಂಡೇಷನ್ ಬೆಳ್ತಂಗಡಿ ಟಕದ ಆಶ್ರಯದಲ್ಲಿ ಡಿ.14ರಂದು ಗುರುವಾಯನಕೆರೆ ನವಶಕ್ತಿ ಆವರಣದಲ್ಲಿ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅವರ ನೇತೃತ್ವದಲ್ಲಿ ನಡೆಯಲಿರುವ ಯಕ್ಷಸಂಭ್ರಮ&2024ರ ಆಮಂತ್ರಣ ಪತ್ರಿಕೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಬಿಡುಗಡೆಗೊಳಿಸಿದರು.
ಬೆಳ್ತಂಗಡಿ ಟಕದ ಅಧ್ಯಕ್ಷ ಸುರೇಶ ಶೆಟ್ಟಿ ಲಾಯಿಲ, ಪ್ರಧಾನ ಕಾರ್ಯದರ್ಶಿ ಶಿತಿಕಂಠ ಭಟ್, ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ರುರಾಮ ಶೆಟ್ಟಿ, ಸಲಹೆಗಾರರಾದ ವಸಂತ ಸುವರ್ಣ, ರಾಜು ಶೆಟ್ಟಿ, ರವೀಂದ್ರ ಶೆಟ್ಟಿ, ಜಯಂತ ಶೆಟ್ಟಿ ಕುಂಟಿನಿ, ಮುರಳಿಕೃಷ್ಣ ಆಚಾರ್, ಜಯಪ್ರಕಾಶ್, ಪ್ರಕಾಶ ಶೆಟ್ಟಿ ನೊಚ್ಚ, ವಸಂತ ಶೆಟ್ಟಿ, ಕೃಷ್ಣ ಕುಮಾರ್ ಪಂಜಿರ್ಪು ವಿಶ್ವನಾಥ ಶೆಟ್ಟಿ, ಪ್ರಸಾದ್ ಶೆಟ್ಟಿ ದಿವಾಕರ ಆಚಾರ್ಯ ಗೇರುಕಟ್ಟೆ, ರವಿ ಚೆಕ್ಕಿತ್ತಾಯ, ವೆಂಕಟ್ರಮಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.