ಯಕ್ಷ ಗಾನ ವೈಭವ ಮಸ್ತಕದಲ್ಲಿ ಉಳಿಯುವಂಥದ್ದು : ಬಿ.ಕಿಶೋರ್ ಕುಮಾರ್

shwethayana
ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯ ಯಕ್ಷ-ಗಾನ-ವೈಭವ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರನ್ನು ಅಭಿನಂದಿಸಲಾಯಿತು
Published on

ಕೋಟ: ಕುಂದಾಪುರ ಹೃದಯ ಭಾಗದಲ್ಲಿ ಡಿಪ್ಲೊಮೇಟ್ ಹೋಟೆಲ್ ಹತ್ತಿರ ಸಾಹಿತ್ಯ ಚಟುವಟಿಕೆಗಾಗಿ ಪ್ರಕಾಶಾಂಗಣ ಎನ್ನುವ ಹೆಸರಿನಲ್ಲಿ ತೆರೆದುಕೊಂಡ ಸ್ಟುಡಿಯೋ, ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್, ಯಶಸ್ವೀ ಕಲಾವೃಂದದ ಗಾನವೈಭವದೊಂದಿಗೆ ಸಂಪನ್ನಗೊಂಡಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮಾತನಾಡಿದರು.

ಕುಂದಾಪುರ ಕಲಾಕ್ಷೇತ್ರದಲ್ಲಿ ಜೂನ್ 30ರಂದು, ಪ್ರಕಾಶಾಂಗಣ ಸ್ಟುಡಿಯೋದಲ್ಲಿ ಶ್ವೇತಯಾನ-39ನೇಯ ಕಾರ್ಯಕ್ರಮವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯ ಯಕ್ಷ-ಗಾನ-ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತ್ತೆ ಮತ್ತೆ ಕೇಳಬೇಕು, ನೋಡಬೇಕು ಎಂದೆನಿಸುವ ಯಕ್ಷಗಾನದ ಪೌರಾಣಿಕ ಆಧಾರಿತ ಪದ್ಯಗಳ ಗಾನ ವೈಭವ ಮಸ್ತಕದಲ್ಲಿ ಉಳಿಯುವಂಥದ್ದು. ಸಂಸ್ಥೆ 25 ವರ್ಷದ ತಪಸ್ಸು ಫಲ ನೀಡುವ ಕಾಲ ಕೂಡಿಬಂದಿದೆ ಎಂದರು.

ಕಲೆ ಕಲಾಭಿಮಾನಿಗಳಿಂದ ಕರಾವಳಿ ತಡಿಯಲ್ಲಿ ಭದ್ರವಾಗಿ ಬೇರೂರಿದೆ. ಕಲೆಯನ್ನು ಚಿಣ್ಣರಿಂದ ಬೆಳಗಿಸಬೇಕು. ವಿಶ್ವವ್ಯಾಪಿಯಾಗಿರುವ ಯಕ್ಷಗಾನ ಬಹು ಎತ್ತರಕ್ಕೇರಿಸಿದವರು ಕಲಾಭಿಮಾನಿಗಳು. ವಿದೇಶದಲ್ಲಿ ನೆಲೆಯಾಗಿರುವ ಅನೇಕ ಯಕ್ಷಗಾನಾಸಕ್ತರು ವಿದೇಶಗಳಲ್ಲಿ ಕನ್ನಡ ಸಂಘ ಹಾಗೂ ಇನ್ನಿತರ ಸಂಘಗಳ ಮೂಲಕ ಅಲ್ಲಲ್ಲಿ ಯಕ್ಷಗಾನ ಪ್ರದರ್ಶಿಸಿ, ಗೆದ್ದು ಬೆಳೆಸಿದರು ಎಂದು ಹಿರಿಯ ಭಾಗವತರಾದ ರಾಘವೇಂದ್ರ ಮೈಯ್ಯ ಅಭಿಪ್ರಾಯಪಟ್ಟರು.
ರಾಘವೇಂದ್ರ ಹೆಗಡೆ ಯಲ್ಲಾಪುರ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ರಾಹುಲ್ ಕುಂದರ್ ಕೋಡಿ, ಕಿಶನ್ ಪೂಜಾರಿ, ಪವನ್ ಆಚಾರ್, ರಾಹುಲ್ ಅಮೀನ್ ಕೊಮೆ, ಪಂಚಮಿ ವೈದ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net