ಬೆಳ್ಮಣ್ ರೋಟರಿ ಕ್ಲಬ್ ಪದಗ್ರಹಣ

rotary pada
ಬೆಳ್ಮಣ್ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ರಣೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು
Published on

ಕಾರ್ಕಳ: ಬೆಳ್ಮಣ್ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ ಪಡುಬೆಳ್ಮಣ್‌ನಲ್ಲಿ ಶನಿವಾರ ನಡೆಯಿತು. ಬ್ಯಾಂಕ್ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿ ಗುಜರಾತ್‌ನ ಬರೋಡಾ ಶಾಖೆಗೆ ವರ್ಗಾವಣೆಗೊಂಡ ಸಮಾಜ ಸೇವಕ ರಣೀಶ್ ಶೆಟ್ಟಿ ನಂದಳಿಕೆ ಅವರನ್ನು ಸನ್ಮಾನಿಸಲಾಯಿತು. ಬೆಳ್ಮಣ್ ರೋಟರಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸುಭಾಸ್‌ಚಂದ್ರ ಶೆಟ್ಟಿ ಕೊಡ್ಲಾಡಿ ಪದಗ್ರಹಣ ಅಧಿಕಾರಿಯಾಗಿದ್ದರು. ಅಧ್ಯಕ್ಷರಾಗಿ ಮುರಳೀಧರ ಜೋಗಿ ಅಧಿಕಾರ ಸ್ವೀಕರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ರೋಟರಿ ಕ್ಲಬ್‌ನ ವಿಶೇಷ ಸಂಚಿಕೆಯನ್ನು ವಲಯ 5ರ ಸಹಾಯಕ ಗವರ್ನರ್ ಅನಿಲ್ ಡೇಸಾ ಬಿಡುಗಡೆಗೊಳಿಸಿದರು.

ಸಂಪಾದಕ ಆಲ್ವಿನ್ ನೇರಿ ಪಿಂಟೊ, ನಿಕಟಪೂರ್ವ ರೋಟರಿ ಸಹಾಯಕ ಗವರ್ನರ್ ಕೆ.ಶೈಲೇಂದ್ರ ರಾವ್, ವಲಯ ಸೇನಾನಿ ಚಂದ್ರ ಪೂಜಾರಿ, ನೂತನ ವಲಯ ಸೇನಾನಿ ಸುರೇಶ್ ನಾಯಕ್ ಶುಭ ಹಾರೈಸಿದರು. ನೂತನ ಅಧ್ಯಕ್ಷ ಮುರಳೀಧರ ಜೋಗಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ವರದಿ ವಾಚಿಸಿದರು. ಸುನೀಲ್‌ದೇವ್ ನಿರೂಪಿಸಿದರು. ನೂತನ ಕಾರ್ಯದರ್ಶಿ ರಾಜೇಶ್ ಸಾಲ್ಯಾನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net