ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತೇ ಮಿಗಿಲು: ನ್ಯಾಯಾಧೀಶ ಮರುಳುಸಿದ್ದಾರಾಧ್ಯ

ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತೇ ಮಿಗಿಲು: ನ್ಯಾಯಾಧೀಶ ಮರುಳುಸಿದ್ದಾರಾಧ್ಯ
Published on: 

ಯಾದಗಿರಿ: ಎಲ್ಲ ಸಂಪತ್ತುಗಳಿಗಿಂತ ಆರೋಗ್ಯವೇ ದೊಡ್ಡ ಸಂಪತ್ತು. ಇದನ್ನು ಪ್ರತಿಯೊಬ್ಬರು ಕಾಯ್ದುಕೊಳ್ಳುವ ಮೂಲಕ ಉತ್ತಮ ಜೀವನ ನಡೆಸಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮರುಳಾಸಿದ್ದಾರಾಧ್ಯ ಎಚ್.ಜೆ. ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,ಶಶಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಅವಿಜ್ಞಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನೇಕರು ಕೆಲಸಗಳ ಒತ್ತಡಗಳಲ್ಲಿ ಆರೋಗ್ಯಕಡೆ ಗಮನ ಕೊಡುವುದಿಲ್ಲ, ಹಾಗೇ ಮಾಡದೇ ಕಾಲ,ಕಾಲಕ್ಕೆ ತಪಾಸಣೆ ಮಾಡಿಕೊಂಡರೇ ಯಾವುದೇ ಭಯ ಇರುವುದಿಲ್ಲ ಎಂದರು.

ನಾವು ಎಲ್ಲೆ ಕೆಲಸ ಮಾಡಲಿ,ನಮ್ಮ ಆರೋಗ್ಯ ಹದಗೆಟ್ಟಾಗ ಹಿಂದೆ,ಮುಂದೆ ನೋಡದೇ ಮೊದಲು ಆರೋಗ್ಯ ತಪಾಸಣೆ ಮಾಡಿಕೊಳ್ಳಲ್ಲೇಬೇಕೆಂದು ಅವರು ಕಿವಿ ಮಾತು ಹೇಳಿದರು.

ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು, ಆಗಲೂ ಇದೇ ರೀತಿಯ ಸಹಕಾರ ಕೊಡಬೇಕೆಂದು ನ್ಯಾಯಾಧೀಶರು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ವಿವಿಧ ಕೊರ್ಟ್ ಗಳ ನ್ಯಾಯಾಧೀಶರಾದ ಎ.ಈರಣ್ಣ, ಬಾಳಾ ಸಾಹೇಬ್ ವಡವಾಡೆ, ಅರುಣ ಚೌಗಲೆ,ಜಗದೀಶ ಕಿತ್ತೂರ, ಡಾ.ಸುನೀಲಕುಮಾರ, ಡಾ.ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಶಿರಗೋಳ ಸೇರಿದಂತೆಯೇ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net