ಕೆಲವು ಅಂಗನವಾಡಿ ಕಾರ್ಯಕರ್ತಯರಿಗೆ ಎರಡು ಅಂಗನವಾಡಿ ಪ್ರಭಾರ ಇರುವದರಿಂದ ದಾಖಲೆಗಳನ್ನು ನಿರ್ವಹಣೆ ಮಾಡುವುದಕ್ಕೆ ಸಮಸ್ಯೆಯಾಗಿದನ್ನು ಬಗೆಹರಿಸಬೇಕು,ಬಿಸಿ ಊಟ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಎಸ್ ಡಿ ಎಂಸಿ ಸಮಿತಿಯವರಿಂದ ಆಗುತ್ತಿರುವ ಕಿರುಕುಳ ನಿಲ್ಲಬೇಕೆಂದು ಅವರು ಆಗ್ರಹಿಸಿದರು.ಗ್ರಾಪಂ ನೌಕರರ ಸಂದ ಜಿಲ್ಲಾಧ್ಯ ಬಸವರಾಜ ದೊರೆ ಮಾತನಾಡಿ, ಕಟ್ಟಡ ಕಾರ್ಮಿಕರು ಅರ್ಜಿ ಹಾಕಿದಾಗ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ತಿರಸ್ಕಾರ ಮಾಡುತ್ತಿದ್ದಾರೆಂದು ಆರೋಪಿಸಿದರು.ಕಾರ್ಮಿಕರಿಗೆ ಸರ್ಕಾರದಿಂದ ಬರುವ ಸೌಲಭ್ಯವನ್ನು ಒದಗಿಸಬೇಕು.ಗ್ರಾಮ ಕಾಯಕ ಮಿತ್ರರಿಗೆ ಮಾನವ ದಿನಗಳು ತೆಗೆಯಬೇಕು. ಸೈಟಲ್ಲಿ ಮೊಬೈಲ್ ಸಮಸ್ಯೆಯಾಗುತ್ತಿದ್ದು,ಕಾರಣ ಅವರದ್ದೇ ಮೊಬೈಲ್ಗೆ ರಿಚಾರ್ಜ್ ಮಾಡುವ ವ್ಯವಸ್ಥೆ ಮಾಡಬೇಕು. ಗ್ರಾಮ ಕಾಯಕ ಮಿತ್ರರಿಗೆ ಕೆಲಸದ ಸ್ಥಳಕ್ಕೆ ಬಂದು ಹೋಗಲು ಹಣ ಪ್ರತಿ ತಿಂಗಳು 5 ತಾರೀಕಿಗೆ ಜಮಾ ಮಾಡಬೇಕು. ಕೆಲಸದ ಭದ್ರತೆ ನೀಡಬೇಕೆಂದು ಅವರು ಆಗ್ರಹಿಸಿದರು. ಅಂಗನವಾಡಿ ನೌಕರರ ಸಂದ ಜಿಲ್ಲಾಧ್ಯೆ ಅನೀತಾ ಹಿರೇಮಠ ಮಾತನಾಡಿ, ಸರ್ಕಾರವೇ ಒಪ್ಪಿಕೊಂಡಿರುವ ಪ್ರಕಾರ 5000 ರೂ.ಎಲ್ಲ ನೌಕರರಿಗೆ ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರ ನಿಧನ ಹೊಂದಿದರೆ ಅವರಿಗೆ 5 ಲ ರೂ.ಇಡಗಂಟು ನೀಡಬೇಕು.ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು.ಪ್ರತಿಯೊಂದು ಪಂಚಾಯತಿಗೆ ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಬೇಕು.ಈಗಾಗಲೇ ಆರೋಗ್ಯದ ಕುರಿತು ಸಿಬ್ಬಂದಿಗಳ ಮಾಹಿತಿಗಾಗಿ ಫಾರ್ಮೆಟ್ ಕಳಿಸಲಾಗಿದ್ದು, ಅದರಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ, ಕಾರ್ಮಿಕರ ಮಾಹಿತಿ ನೀಡಲು ತಿಳಿಸಲಾಗಿದ್ದು, ಪರ್ಮನೆಂಟ್ ಕಾಲಂನಲ್ಲಿ ಪಂಚಾಯತ್ ನೌಕರರೆಂದು ಮಾಹಿತಿ ಇಲ್ಲ, ಇದನ್ನು ಸರಿಪಡಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಸಿಐಟಿಯು ಸಂಟನೆಯ ಜಿಲ್ಲಾ ಸಂಚಾಲಕಿ ಪ್ರಧಾನ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕರ್ ಮಾತನಾಡಿದರು.