ಚಿಣ್ಣರ ಉತ್ಸಾಹ: ೪-೧೦ ವರ್ಷದ ೫೦ಕ್ಕೂ ಹೆಚ್ಚು ಮಕ್ಕಳು ಗಣವೇಷಧರಿಸಿ ದೇಶಭಕ್ತಿ ಮೆರೆದಿದ್ದು ವಿಶೇಷವೆನಿಸಿತು. ಬಿಸಿಲು ಲೆಕ್ಕಿಸದೆ ಗಂಟೆಗಟ್ಟಲೆ ನಿಂತು ಗಣವೇಷಧಾರಿಗಳಿಗೆ ಚಿಣ್ಣರು ಉತ್ಸಾಹ ತುಂಬಿದರು. ಪುರಸಭೆ ಪಕ್ಕದ ಖಾಸಗಿ ಮೈದಾನದಿಂದ ಶುರುವಾದ ಪಥಸಂಚಲನ ಗೌಡರ ಓಣಿ, ಝೇಂಡಾ ಕಟ್ಟಾ, ತೋಟದಪ್ಪ ದೇವಸ್ಥಾನ, ಮಲ್ಲಯ್ಯ ದೇವಸ್ಥಾನ, ಸೊನ್ನದ ಬಡಾವಣೆ, ಕಾಳಿಕಾ ದೇವಿ ದೇವಸ್ಥಾನ, ಟಿಪ್ಪು ಸುಲ್ತಾನ್ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ, ಶ್ರೀರಾಮ ಚೌಕ್, ಎಸ್‌ಬಿಐ ವೃತ್ತ, ಬಸವೇಶ್ವರ ವೃತ್ತ, ಮ್ಯಾಗೇರಿ, ಹಳೇ ಬಸ್ ನಿಲ್ದಾಣ, ಮುಖ್ಯ ಬಜಾರ್ ಮಾರ್ಗವಾಗಿ ಪುನಃ ಖಾಸಗಿ ಮೈದಾನಕ್ಕೆ ಬಂದು ಕೊನೆಗೊಂಡಿತು.