

"ಈ ಸೂಳಿಗಾಳಿಯ ಎಫೇಕ್ಟ್ ಮತ್ತು ಚಳಿಗಾಲದ ತಂಪು ಗಾಳಿಯಿಂದ ಸಹಜವಾಗಿ ಅನೇಕರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಈ ವೇಳೆ ಕಾಯಿಸಿ ಆರಿಸಿದ ನೀರನ್ನೇ ಸೇವಿಸಬೇಕು. ಸೊಳ್ಳೆ ಬರಂದತೆ ಮನೆ, ಅಂಗಳ ಮತ್ತು ಅಕ್ಕಪಕ್ಕದ ಜಾಗ ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೊರಗಿನ ಪದಾರ್ಥ ಈ ವೇಳೆ ತಿನ್ನಬಾರದು. ಮುಖ್ಯವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಕಡೆ ಗಮನ ವಹಿಸಬೇಕು.
| ಡಾ.ಮಹೇಶ ಬಿರಾದಾರ ಡಿಎಚ್‌ಒ ಯಾದಗಿರಿಹವಮಾನ ಇಲಾಖೆ
ಪ್ರಕಾರ ಬಂಗಾಲಕೊಲ್ಲಿಯಲ್ಲಿ ಉಂಟಾದ ಸೂಳಿಗಾಳಿ ನೇರವಾಗಿ ತಮಿಳುನಾಡು ಪ್ರವೇಶಿಸಿದ್ದು, ಅದರ ಕೆಟ್ಟ ಪರಿಣಾಮ ನಮ್ಮ ಭಾಗದಲ್ಲಿ ಆಗಿ, ೩-೪ ದಿನಗಳವರೆಗೆ ಹಗುರದಿಂದ ಸಾಧಾರಣವಾದ ಮಳೆ ಬರುತ್ತದೆ. ಇದು ಮಳೆಗಾಲ ಮಳೆ ಅಲ್ಲ. ಈ ವೇಳೆ ಆರೋಗ್ಯದ ಕಡೆ ಹೆಚ್ಚು ಗಮನವಹಿಸಿ.
| ರತೇಂದ್ರನಾಥ ಸೂಗೂರುಜಂಟಿ ನಿರ್ದೇಶಕರು ಕೃಷಿ ಇಲಾಖೆ ಯಾದಗಿರಿ