ಹಾಲಗೇರಾ ದಸರಾ ಮಹೋತ್ಸವಕ್ಕೆ ತೆರೆ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ದೇವರ ಹಾಲಗೇರಾದಲ್ಲಿ ಬುಧವಾರ ನಡೆದ ದಸರಾ ಹಬ್ಬದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ದೇವರ ಹಾಲಗೇರಾದಲ್ಲಿ ಬುಧವಾರ ನಡೆದ ದಸರಾ ಹಬ್ಬದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ.
Published on: 

ಯಾದಗಿರಿ: ಘಂಟೆ, ಜಾಗಟೆ, ಡೊಳ್ಳು, ಭಾಜಾ ಭಜಂತ್ರಿ ನಾದ ನಿನಾದದೊಂದಿಗೆ ಕಳೆದ 10 ದಿನಗಳಿಂದ ಆರಂಭವಾದ ವಡಗೇರಾ ತಾಲೂಕಿನ ದೇವರ ಹಾಲಗೇರಾ ಐತಿಹಾಸಿಕ ನವರಾತ್ರಿ ಉತ್ಸವ ಬುಧವಾರ ಶ್ರದ್ಧಾ&ಭಕ್ತಿಯಿಂದ ಅದ್ದೂರಿಯಾಗಿ ತೆರೆ ಕಂಡಿತು.

ಗ್ರಾಮದ ಹನುಮಾನ್​ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ನಿಂಗಪ್ಪ ಪೂಜಾರಿ ಸರಪಳಿ ಹರಿಯುವುದರೊಂದಿಗೆ ಸಂಭ್ರಮದ ಹಬ್ಬದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ವಿಜಯದಶಮಿ ದಿನದಂದು ಗ್ರಾಮದ ಯಲ್ಲಮ್ಮದೇವಿ ಬನ್ನಿ ಪೂಜೆಯ ನಂತರ ಜಾತಿ, ಮತ, ಪಂಥ, ಮೇಲು ಕೀಳು ಬೇಧವಿಲ್ಲದೆ ಗ್ರಾಮಸ್ಥರು ಬನ್ನಿ ಬಂಗಾರ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಭ್ರಮಿಸಿದರು.

ಗ್ರಾಮದ ಪ್ರತಿಯೊಂದು ಸಮುದಾಯಗಳು ಒಗ್ಗಟ್ಟಾಗಿರಲಿ ಎನ್ನುವ ಉದ್ದೇಶದಿಂದ ದಸರಾ ಆಚರಣೆ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲು ಗ್ರಾಮದ ಪೊಲೀಸ್​ಗೌಡರು, ಮಾಲಿಗೌಡರು, ವಿಶ್ವಕರ್ಮ ಸಮುದಾಯ, ಕುರುಬ ಸಮುದಾಯ, ಕಬ್ಬಲಿಗ ಸಮುದಾಯ, ಮಡಿವಾಳ, ಮಾತಂಗ ಸಮುದಾಯ ಹೀಗೆ ಪ್ರತಿಯೊಂದು ಸಮುದಾಯವು ಒಂದೊಂದು ಸಂಪ್ರದಾಯಬದ್ಧವಾದ ಕಾರ್ಯ ಮಾಡುವುದರೊಂದಿಗೆ ಹಬ್ಬಕ್ಕೆ ಕಳೆ ತಂದರು.

ಹತ್ತು ಹಲವು ಧಾರ್ಮಿಕ ಕಾರ್ಯಗಳನ್ನು ಒಬ್ಬೊಬ್ಬರಾಗಿ ಮಾಡುವ ಮೂಲಕ ವೈಭವದ ದಸರಾ ಸರಪಳಿ ಹರಿಯುವುದರೊಂದಿಗೆ ಸಮಾರೋಪಗೊಂಡಿತು. ಈ ವೇಳೆ ದೊಡ್ಡಪ್ಪ ಮುತ್ಯಾ, ಪರಪ್ಪ ಮುತ್ಯಾ, ವಿರುಪಣ್ಣಗೌಡ ಮಾಲಿಪಾಟೀಲ್​, ನರಸರಡ್ಡಿಗೌಡ ದೇಸಾಯಿ, ಚಂದ್ರುಗೌಡ ಪೊಲೀಸ್​ ಪಾಟೀಲ್​ ಹಾಲಗೇರಾ, ಉಮೇಶ ಮುದ್ನಾಳ, ಮಲ್ಲಣಗೌಡ ಕೆಳಮನಿ, ಭೀಮರಾಯ ನಾಟೇಕಾರ, ಹುಸೇನ್​ಸಾಬ ನಾಶಿ, ಮಲ್ಲನಗೌಡ ಮಾಲಿ ಪಾಟೀಲ, ರೆಡ್ಡೆಪ್ಪ ನಾಟೇಕಾರ, ಸಂಗಪ್ಪ ಮಾಜಿ ಚೇರಮನ್​, ರಾಮು ನಾಟೇಕಾರ, ಅಯ್ಯಪ್ಪ ನಾಯ್ಕೋಡಿ, ಆವಣ್ಣ ಪೂಜಾರಿ, ಬಸಪ್ಪ ಪೂಜಾರಿ, ಯಲ್ಲಪ್ಪ ನಾಯ್ಕೋಡಿ, ಬಸವಲಿಂಗಪ್ಪ ಕಲಾಲ, ಭೀಮರಾಯ ನಾಯ್ಕೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net