ಎಲ್ಲರೂ ಅಂಚೆ ಕಚೇರಿ ಲಾಭ ಪಡೆಯಿರಿ

ಕಕ್ಕೇರಾ ಪಟ್ಟಣದ ಮೇಲ್ದಜೇಗೇರಿದ ಉಪ ಅಂಚೆ ಕಚೇರಿಯನ್ನು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಉದ್ಘಾಟಿಸಿದರು. ಬಿ.ಎಲ್​.ರವೀಂದ್ರ, ಗುಂಡಪ್ಪ ಸೊಲಾಪುರ, ಜಟ್ಟೆಪ್ಪ ದಳಾರ, ಬಸಯ್ಯಸ್ವಾಮಿ ಇತರರಿದ್ದರು.
ಕಕ್ಕೇರಾ ಪಟ್ಟಣದ ಮೇಲ್ದಜೇಗೇರಿದ ಉಪ ಅಂಚೆ ಕಚೇರಿಯನ್ನು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಉದ್ಘಾಟಿಸಿದರು. ಬಿ.ಎಲ್​.ರವೀಂದ್ರ, ಗುಂಡಪ್ಪ ಸೊಲಾಪುರ, ಜಟ್ಟೆಪ್ಪ ದಳಾರ, ಬಸಯ್ಯಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಅಧೀಕ್ಷಕ ಬಿ.ಎಲ್​.ರವೀಂದ್ರ ಸಲಹೆ
  • ಮೇಲ್ದಜೇಗೇರಿದ ಬ್ರಾಂಚ್​ ಆಫೀಸ್​
ಕಕ್ಕೇರಾ: ಪಟ್ಟಣದಲ್ಲಿದ್ದ ಅಂಚೆ ಇಲಾಖೆಯ ಬ್ರ್ಯಾಂಚ್​ ಆಫೀಸ್​(ಬಿಒ)ನ್ನು ಇಂದಿನಿಂದ ಮೇಲ್ದರ್ಜೆಗೇರಿಸಿ ಸಬ್​ ಆಫೀಸ್​ (ಎಸ್​ಒ)ನ್ನಾಗಿ ಪರಿವರ್ತಿಸಿದ್ದು, ಪಟ್ಟಣದ ಪ್ರತಿಯೊಬ್ಬರೂ ಇದರ ಲಾಭ ಪಡೆದುಕೊಳ್ಳಬೇಕು ಎಂದು ಅಂಚೆ ಇಲಾಖೆ ಜಿಲ್ಲಾ ಅಧೀಕ್ಷಕ ಬಿ.ಎಲ್​.ರವೀಂದ್ರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಉಪ ಅಂಚೆ ಕಚೇರಿಯನ್ನಾಗಿ ಮೇಲ್ದರ್ಜೇಗೇರಿದ ಸಮಾರಂಭದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಹಲವು ವರ್ಷಗಳಿಂದ ಅಂಚೆ ಇಲಾಖೆಯ ಬ್ರ್ಯಾಂಚ್​ ಆಫೀಸ್​ ಇತ್ತು. ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯ ಠೇವಣಿದಾರರು ಹಾಗೂ ಉಳಿತಾಯ ಖಾತೆದಾರರು ಮತ್ತು ಜನಸಂಖ್ಯೆಗನುಗುಣವಾಗಿ ಇಂದಿನಿಂದ ಉಪ ಅಂಚೆ ಕಚೇರಿಯನ್ನಾಗಿ ಮೇಲ್ದರ್ಜೇಗೇರಿದ್ದು, ಇನ್ಮುಂದೆ ದೂರದ ಹುಣಸಗಿಗೆ ಅಲೆದಾಡುವುದು ತಪ್ಪಲಿದೆ ಎಂದರು.
ಆನಲೈನ್​ ಪೋಸ್ಟ್​ ಪೇಮಂಟ್​, ಸ್ವೀಡ್​ ಪೋಸ್ಟ್​, ಸಂಧ್ಯಾ ಸುರಾ, ಅಂಗವಿಕಲರು ಅಂಚೆ ಇಲಾಖೆ ಖಾತೆಯ ಜತೆಗೆ ಆಧಾರ್​ ಕಾರ್ಡ್​, ಪೋನ್​ ನಂಬರ್​ ಲಿಂಕ್​ ಇದ್ದರೆ ಇಲ್ಲಿಯೇ ನೇರವಾಗಿ ಹಣ ಪಡೆದುಕೊಳ್ಳಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ಎಲ್ಲ ಸೌಲಭ್ಯ ಕಲ್ಪಿಸಿದ್ದು, ಹುಣಸಗಿಯ 585215 ಪಿನ್​ ಕೋಡ್​ ಬದಲಿಗೆ ಈ ಮೊದಲಿದ್ದ 585285 ಪಿನ್​ ಕೋಡ್​ನ್ನು ಕಕ್ಕೇರಾ ಉಪ ಅಂಚೆ ಕಚೇರಿಗೆ ನೀಡಲಾಗಿದ್ದು ತಿಂಥಣಿ, ಹುಣಸಿಹೊಳೆ, ಗೋಡಿಹಾಳ್​, ಶ್ರೀನಿವಾಸಪುರ, ಬೆಂಚಿಗಡ್ಡಿಯ ಬ್ರ್ಯಾಂಚ್​ ಆಫೀಸ್​(ಬಿಒ)ಗಳು ಇನ್ನು ಮೇಲೆ ಕಕ್ಕೇರಾದ ಉಪ ಅಂಚೆ ಕಚೇರಿಗೆ ಒಳಪಡಲಿವೆ ಎಂದು ಹೇಳಿದರು.
ಉಪ ಅಂಚೆ ಕಚೇರಿಯನ್ನು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಉದ್ಘಾಟಿಸಿದರು. ಅಂಚೆ ಉಪ ಅಧೀಕ್ಷಕ ಕೃಷ್ಣಾ ಮೋಹಿತೆ, ಐಪಿ ಮಹಾಂತೇಶ ಸುರಪುರ್​, ಪುರಸಭೆ ಉಪಾಧ್ಯಕ್ಷ ಜಟ್ಟೆಪ್ಪ ದಳಾರ್​, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪೂರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್​, ಸಹಕಾರ ಸಂದ ಅಧ್ಯಕ್ಷ ಅಮರಪ್ಪ ಮಂಡಿ, ಮುಖಂಡರಾದ ಬಸಯ್ಯಸ್ವಾಮಿ, ಬುಚ್ಚಪ್ಪನಾಯಕ, ಮುದ್ದಣ್ಣ ಅಮ್ಮಾಪೂರ್​, ಯಂಕಣ್ಣ ಗುರಿಕಾರ, ಅಂಚೆ ಇಲಾಖೆ ಸಿಬ್ಬಂದಿ ಪರಶುರಾಮ ಹೊರಟ್ಟಿ, ಸೋಮಶೇಖರ ಗಿಟಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net