

ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ 70 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳ ಆಧಾರದ ಮೇಲೆ ಪ್ರಬುದ್ಧ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ನ.1ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಐತಿಹಾಸಿಕ ಸನ್ನತಿಯಲ್ಲಿ 5 ಲ ಜನರ ಬೃಹತ್ ಬೌದ್ಧ ಧಮ್ಮ ದೀಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೋಧಿಧಮ್ಮ ಝನ್ ಮಾಂಕ್ ಡಾ.ಶಾಕು ಹೇಳಿದರು.
ನಗರದ ಅಂಬೇಡ್ಕರ್ ವೃತ್ತದ ಬಳಿ ಕರ್ನಾಟಕ ಧಮ್ಮಾ ಜನಜಾಗೃತಿ ಯಾತ್ರೆ ನಿಮಿತ್ತ ಸೋಮವಾರ ರಾತ್ರಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ಯಾವುದೇ ಧರ್ಮವನ್ನು ದ್ವೇಷಿಸಿರಲಿಲ್ಲ. ಸಮಾಜದಲ್ಲಿನ ಅಸಮಾನತೆ, ಶೋಷಣೆ ಮತ್ತು ಮೌಢ್ಯಗಳ ವಿರುದ್ಧ ಹೋರಾಡಿದ ಅವರು ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಬೌದ್ಧ ಧಮ್ಮವನ್ನು ಸ್ವೀಕರಿಸಿದ್ದರು.
ನಾಗಪುರದಲ್ಲಿ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸುವ ಮೂಲಕ ದೇಶಕ್ಕೆ ಶಾಂತಿ ಮತ್ತು ಸಮಾನತೆಯ ಸಂದೇಶ ನೀಡಿದ್ದರು. ಅವರ ವಿಚಾರಧಾರೆ ಹಾಗೂ ಮಾರ್ಗದಲ್ಲೆ ಇಂದಿನ ಪೀಳಿಗೆ ಸಾಗಬೇಕಿದೆ ಎಂದು ವರು ತಿಳಿಸಿದರು.
2001ರಲ್ಲಿ ದಣ ಭಾರತದಲ್ಲಿ ಧಮ್ಮಾ ಜನಜಾಗೃತಿ ಯಾತ್ರೆ ನಡೆದಿತ್ತು. ಇದೀಗ ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ 70 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಧಮ್ಮದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಂತಾರಾಷ್ಟ್ರೀಯ ಬೌದ್ಧ ಯುವ ಸಂಟನೆ, ಭಾರತ ಗ್ಲೋಬಲ್ ಡಾ.ಅಂಬೇಡ್ಕರ್ ಬೌದ್ಧ ಮಿಷನ್, ಯುಎಸ್ಎ, ಅಖಿಲ ಭಾರತ ಡಾ.ಅಂಬೇಡ್ಕರ್ ಭಿಕ್ಕು ಸಂ ಹಾಗೂ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಣಾ ಸಂಸ್ಥೆ, ಸನ್ನತಿ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಧಮ್ಮಾ ಜನಜಾಗೃತಿ ಯಾತ್ರೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಸನ್ನತಿಯ ಐತಿಹಾಸಿಕ ನೆಲದಲ್ಲಿ ನಡೆಯಲಿರುವ ಧಮ್ಮ ದೀಾ ಸಮಾರಂಭದಲ್ಲಿ ಸುಮಾರು 5 ಲ ಉಪಾಸಕ&ಉಪಾಸಿಕೆಯರು, ಅಂಬೇಡ್ಕರ್ವಾದಿಗಳು ಹಾಗೂ ಬೌದ್ಧ ಧಮ್ಮ ಅನುಯಾಯಿಗಳು ಭಾಗವಹಿಸುವ ನಿರೀೆ ಇದೆ ಎಂದರು.
ಈ ವೇಳೆ ಭಂತೆ ಸಂಪಾಲ್, ಭೀಕ್ಕು ನಾಗಸೇನಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯ ಬಾಬುರಾವ್ ಕಾಡ್ಲೂರ್, ಧಮ್ಮಚಾರಿ ನಿಂಗಪ್ಪ ಕೊಲ್ಲೂರು, ಶಂಕರ್ ಕೊಂಡಿ, ಮರೆಪ್ಪ ಚಟ್ಟೆರಕರ್, ಸಂದೀಪ ಕಟ್ಟಿ, ಮರೆಪ್ಪ ಬುಕ್ಕಲ್, ಧಮ್ಮ ಯಾತ್ರೆ ಸ್ವಾಗತ ಸಮಿತಿ ಅಧ್ಯ ಗೋಪಾಲ ತೆಳಿಗೇರಿ, ಉಪಾಸಕ ಡಾ.ಭಗವಂತ ಅನವಾರ, ಡಾ.ಸವೋರ್ದಯ ಶಿವುಪುತ್ರ, ದೇವೀಂದ್ರಪ್ಪ ಈಟೇ, ಸುರೇಶ ಬೊಮ್ಮನ್, ಸೈದಪ್ಪ ಕೂಲೂರ್, ಚಂದ್ರಕಾಂತ್ ಚಲುವಾದಿ, ಶರಣು ನಾಟೆಕಾರ್, ಮಾಲ್ಲಿಕಾರ್ಜುನ್ ಅರಿಕೇರಿ, ನಿಂಗಪ್ಪ ಬೀರನಾಳ, ಮಲ್ಲಿಕಾರ್ಜುನ ಕೆಇಬಿ, ಮಲ್ಲಿಕಾರ್ಜುನ ಈಟೇ, ಭೀಮರಾಯ ಹೊಸಮನಿ, ಮಹಾಂತೇಶ್ ವಡ್ನಳ್ಳಿ, ವಸಂತ್ ಸುಂಗುಲ್, ಸಂಪತ್ ಚಿನ್ನಾಕರ್, ಮರೀಲಿಂಗ ಕುರುಕುಂಬಳ್, ಜೈಭೀಮ್ ಕೊಲ್ಲೂರಕರ್, ವಿಜಯಕುಮಾರ್ ಆಶಾನಾಳ್, ಸಿದ್ರಾಮಪ್ಪ ಚಟ್ಟೆರಕರ್ ಇತರರಿದ್ದರು.