ಯಾದಗಿರಿ: ನಗರದ ಗೋಡಾನ್ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ ಭಾರಿ ಪ್ರಮಾಣದ ಪಡಿತರ ಅಕ್ಕಿ ಮತ್ತು ಜೋಳವನ್ನು ಆಹಾರ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ಮಾಡಿ ಜಪ್ತಿ ಮಾಡಿದ ಘಟನೆ ನಗರದಲ್ಲಿ ಸೋಮವಾರ ಸಂಜೆ ನಡೆದಿದೆ.
ಅಶೋಕನಗರದ ಗಂಜ್ ಪ್ರದೇಶದಲ್ಲಿರುವ ಬಾದಲ್ ರೈಸ್ಮಿಲ್ ಹಿಂಭಾಗದ ಗೋಡನ್ನಲ್ಲಿ ಅ.19ರಂದು ಈ ಕಾರ್ಯಾಚರಣೆ ನಡೆದಿದೆ. ಈ ವೇಳೆ ಒಟ್ಟು 339.40 ಕ್ವಿಂಟಾಲï ಅಕ್ಕಿ ಹಾಗೂ 83 ಕ್ವಿಂಟಾಲ್ ಜೋಳ ಪತ್ತೆಯಾಗಿದ್ದು, ಇವುಗಳ ಒಟ್ಟು 10,79 ಲಕ್ಷ ರೂ ಎಂದು ಎಸ್ಐಆರ್ನಲ್ಲಿ ಉಲ್ಲೆಖಿಸಲಾಗಿದೆ.
ಆಹಾರ ನಿರೀಕ್ಷಕ ವಿಠ್ಠಲ ಬಂದಾಳ ಅವರು ನೀಡಿದ ದೂರಿನ ಪ್ರಕಾರ, ಗೋಡನ್ಲ್ಲಿ ಪಡಿತರ ಅಕ್ಕಿಯನ್ನು ವಾಹನಗಳ ಮೂಲಕ ತಂದು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಈ ಕುರಿತು ತಹಸೀಲ್ದಾರ್ಗೆ ಮಾಹಿತಿ ನೀಡಿದ ಬಳಿಕ, ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಲು ಸೂಚನೆ ನೀಡಲಾಗಿತ್ತು. ಅದರಂತೆ ಕಂದಾಯ ನಿರೀಕ್ಷಕ ಗಿರೀಶ್ ರಾಯಕೋಟಿ ಹಾಗೂ ಅಶೋಕನಗರದ ಗ್ರಾಮಾಡಳಿತಾಽಕಾರಿ ಶ್ರೀಧರ ಬಡಿಗೇರ ಅವರನ್ನು ಪಂಚರನ್ನಾಗಿ ಕರೆದುಕೊಂಡು, ಗ್ರಾಮೀಣ ಠಾಣೆಯ ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿಯೊAದಿಗೆ ಅ.19ರಂದು ಸಂಜೆ 6ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಗೋಡಾನ್ ಎದುರು ನಾಲ್ಕು ವಾಹನಗಳು ನಿಂತಿದ್ದು, ಅವುಗಳಲ್ಲಿ ಧಾನ್ಯ ತುಂಬಿರುವುದು ಪತ್ತೆಯಾಗಿದೆ. ವಾಹನಗಳ ಪೈಕಿ ಒಂದು ವಾಹನದಲ್ಲಿ 115 ಅಕ್ಕಿ ಚೀಲಗಳು, ಮತ್ತೊಂದು ವಾಹನದಲ್ಲಿ 80 ಚೀಲ ಅಕ್ಕಿ ಹಾಗೂ ಮೂರನೇ ವಾಹನದಲ್ಲಿ 84 ಜೋಳದ ಚೀಲಗಳಿದ್ದವು. ನಾಲ್ಕನೇ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿದು ಬಂದಿದೆ.
ನಂತರ ಗೋಡಾನ್ ಪರಿಶೀಲಿಸಿದಾಗ ಗೋಣಿಚೀಲಗಳಲ್ಲಿ ತುಂಬಿದ್ದ 140 ಅಕ್ಕಿ ಚೀಲಗಳು, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಅಕ್ಕಿ ಸೇರಿ ಒಟ್ಟು 339.40 ಕ್ವಿಂಟಾಲï ಅಕ್ಕಿ ಹಾಗೂ 120 ಜೋಳದ ಚೀಲಗಳು ಪತ್ತೆಯಾಗಿವೆ. ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ಧಾನ್ಯಗಳನ್ನೂ ಸೇರಿಸಿ ಜಪ್ತಿ ಮಾಡಲಾಗಿದೆ ಎಂದು ಎಸ್ಐಆರ್ನಲ್ಲಿ ಮಾಹಿತಿ ನೀಡಲಾಗಿದೆ.
ಜಪ್ತಿ ಮಾಡಿದ ಧಾನ್ಯಗಳ ಮಾದರಿ ಸಂಗ್ರಹಿಸಿ ಪಂಚರ ಸಮ್ಮುಖದಲ್ಲಿ ಸೀಲï ಮಾಡಲಾಗಿದೆ. ಬಳಿಕ ಅಕ್ಕಿ ಮತ್ತು ಜೋಳವನ್ನು ತೂಕ ಮಾಡಿಸಿ, ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿರುವ ಗೋಡಾನ್ಲ್ಲಿ ದಾಸ್ತಾನು ಮಾಡಿ ಸಂಬಂಧಪಟ್ಟವರಿಂದ ರಸೀದಿ ಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೆಖಿಸಲಾಗಿದೆ.
ಐವರ ವಿರುದ್ಧ ಪ್ರಕರಣ ದಾಖಲು
ಗೋಡಾನ್ ಮಾಲೀಕ ಎಂದು ದೂರಿನಲ್ಲಿ ಉಲ್ಲೆಖಿಸಿರುವ ಗುರುಮಠಕಲ್ನ ವೆಂಕಿ ರಾಠೋಡ್, ಅಕ್ಕಿ ಸಾಗಿಸುತ್ತಿದ್ದ ಕೆಎ-33 ಎ-6439 ವಾಹನದ ಚಾಲಕ ಯಳಸಂಗಿಯ ಶಂಕರ ಸೋಮು ಚವ್ಹಾಣ್, ಕೆಎ-33 ಬಿ-8797 ವಾಹನದ ಚಾಲಕ ಯಾದಗಿರಿ ಶಹಾಪುರ ಪೇಟೆಯ ಮೊಹಮ್ಮದ್ ಸಮೀರುದ್ದೀನ್, ಕೆಎ-33 ಎ-5505 ವಾಹನದ ಚಾಲಕ ಚಿತ್ತಾಪುರ ತಾಲೂಕಿನ ಲಾಡ್ಲಾಪುರದ ಪ್ರಮೋದ್ ಪೋಮು ರಾಠೋಡ್ ಹಾಗೂ ಕೆಎ-32 ಎಬಿ-2710 ವಾಹನದ ಗುರುತು ಪತ್ತೆಯಾಗದ ಚಾಲಕನ ವಿರುದ್ಧ ದೂರು ನೀಡಲಾಗಿದೆ. ಆರೋಪಿತರು ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3, 6 ಮತ್ತು 7 ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಂಬAಽಸಿದ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಆರೋಪ ತನಿಖೆಯಲ್ಲಿ ಸಾಬೀತಾಗಬೇಕಿದೆ. ಆಹಾರ ನಿರೀಕ್ಷಕ ವಿಠ್ಠಲ ಬಂದಾಳ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜಂಟಿ ಕಾರ್ಯಚರಣೆ
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ಚೀಟಿದಾರರಿಗೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಿಸಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡಿ ಸಂಗ್ರಹಿಸಿಟ್ಟಿರುವ ಆರೋಪದ ಮೇರೆಗೆ ಆಹಾರ ಇಲಾಖೆ ಅಽಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.