ಯಾದಗಿರಿ : ಯಾದಗಿರಿ ಜಿಲ್ಲೆಯ ಯಾದಗಿರಿ ಪಟ್ಟಣದ ಮಹಾಯೋಜನೆ (ಪರಿಷ್ಕೃತ-1)ಯನ್ನು ತಯಾರಿಸುವ ಮಹಾಯೋಜನೆ (ಪರಿಷ್ಕೃತ-1) ತಯಾರಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 10 ರಡಿಯಲ್ಲಿ ಪ್ರಕಟಿಸಿದೆ ಎಂದು ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಅವರು ತಿಳಿಸಿದ್ದಾರೆ.
ಯಾದಗಿರಿ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 10ರ ಅಡಿಯಲ್ಲಿ ಮಹಾಯೋಜನೆಯ (ಪರಿಷ್ಕೃತ-1)ಯನ್ನು ತಯಾರಿಸುವ ಉದ್ದೇಶವನ್ನು ಹೊಂದಿದ್ದು, ಮಾನ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ : ನಅಇ 156ಗುಅಪ್ರಾ 2015 ದಿನಾಂಕ 20-08-2015 ರಂದು ಮಹಾಯೋಜನೆ ಅಂತಿಮ ಅನುಮೋದನೆಗೊಂಡಿದ್ದು, ಮಾನ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ:ನಅಇ 203 ಗುಅಪ್ರಾ 2022 (ಇ) ದಿನಾಂಕ 26-09-2024 ಪ್ರಕಾರ ವಿಸ್ತರಿಸಲಾದ ಸ್ಥಳೀಯ ಯೋಜನಾ ಪ್ರದೇಶದ ಯಾದಗಿರಿ ಬಿ ಯಾದಗಿರಿ ಕೆ ಮುಂಡರಗಾ ಚಾಮನಳ್ಳಿ, ಅಶೋಕನಗರ, ಬಂದಳ್ಳಿ, ಎಂ ಹೊಸಳ್ಳಿ, ಭೀಮನಗರ, ದಸ್ತರಾಬಾದ ಮತ್ತು ವರ್ಕನಳ್ಳಿ ಗ್ರಾಮಗಳನ್ನು ಸೇರಿಸಿ ಯಾದಗಿರಿ ಪಟ್ಟಣಕ್ಕಾಗಿ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸಲಾಗಿದೆ. ಈ ಆದೇಶದಲ್ಲಿ ಪರಿಷ್ಕೃತ ವಿಸ್ತರಿಸಲಾದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಎರಡು ವರ್ಷ ಒಳಗೆ ಮಹಾಯೋಜನೆ ತಯಾರಿಸಿ ಮಾನ್ಯ ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿರುತ್ತದೆ. ನಿಯಮಾನುಸಾರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 10ರ ಅಡಿಯಲ್ಲಿ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಿದೆ.
ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಬಹುದಾಗಿರುತ್ತದೆ, ಈ ಪ್ರಕಟಣೆ ಪ್ರಕಟಣೆಯಾದ ದಿನಾಂಕದಿAದ 60 ದಿನಗಳ ಒಳಗೆ ಸ್ವತಃ ಅಥವಾ ನೋಂದಾಯಿತ ಅಂಚೆ ಮುಖಾಂತರ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಆಯುಕ್ತರು, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಯಾದಗಿರಿ ಇಲ್ಲಿ ಸ್ವೀಕರಿಸಲಾಗುವುದು. ನಿಗಧಿತ ಅವಧಿ ಮೀರಿ ಬಂದ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ