ಯಾದಗಿರಿ : ತೆರವಾಗಿರುವ ಪಂಚಾಯತಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ವೇಳಾ ಪಟ್ಟಿ ಪ್ರಕಟ

Yadagiri DC Meeting
Published on

ಯಾದಗಿರಿ : ರಾಜ್ಯ ಚುನಾವಣಾ ಆಯೋಗವು 2023ರ ಡಿಸೆಂಬರ್ ಮಾಹೆಯಿಂದ 2025ರ ಜನವರಿ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಪಂಚಾಯತಿ ಕ್ಷೇತ್ರಗಳಲ್ಲಿ ಉಪ ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ ಎಂದು ಯಾದಗಿರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ತಾಲ್ಲೂಕಿನಲ್ಲಿ 11-ಕನ್ಯಾಕೋಳ್ಳೂರು, 19-ಬೀರನೂರು, ಶೋರಾಪುರ ತಾಲ್ಲೂಕಿನಲ್ಲಿ 6-ದೇವಾಪೂರ, ಮತ್ತು 3-ಹೆಮನೂರು ಯಾದಗಿರಿ ತಾಲ್ಲೂಕಿನಲ್ಲಿ 9-ಮೂಂಡರಗಿ, 2-ಅರಕೇರಾ (ಬಿ), 11- ಅರಕೇರಾ (ಕೆ), 7-ಬಂದಳ್ಳಿ ಮತ್ತು 13-ಹಳಗೇರಾ, ಗುರುಮಿಠಕಲ್ ತಾಲ್ಲೂಕಿನಲ್ಲಿ 3-ಮಾದ್ವಾರ, 11-ಕಂದಕೂರ ಮತ್ತು 8-ಯಲಸತ್ತಿ, ಹುಣಸಗಿ ತಾಲ್ಲೂಕಿನ 7-ಮಾರನಾಳ ಮತ್ತು 5-ರಾಜನಕೋಳ್ಳುರ ಕ್ಷೇತ್ರದಲ್ಲ್ಲಿ ತೆರವಾಗಿರುವ ಕ್ಷೇತ್ರಗಳಿಗೆ ಮಾತ್ರ ಚುನಾವಣೆಯನ್ನು ನಡೆಸಲಾಗುವುದು. ಗ್ರಾಮ ಪಂಚಾಯತಿಗಳಲ್ಲಿಯ ಚುನಾವಣೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು 2024ರ ನವೆಂಬರ್ 6 ರಿಂದ 2024ರ ನವೆಂಬರ್ 26ರ ರವರೆಗೆ ಜಾರಿಯಲ್ಲಿರುತ್ತದೆ.

ಚುನಾವಣಾ ವೇಳಾಪಟ್ಟಿ ಪ್ರಕಟ 2024ರ ನವೆಂಬರ್ 6ರ ಬುಧವಾರ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಿದೆ. 2024ರ ನವೆಂಬರ್ 12ರ ಮಂಗಳವಾರ ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. 2024ರ ನವೆಂಬರ್ 13ರ ಬುಧವಾರ ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಯಲಿದೆ. 2024ರ ನವೆಂಬರ್ 15ರ ಶುಕ್ರವಾರ ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. 2024ರ ನವೆಂಬರ್ 23ರ ಶನಿವಾರ ರಂದು ಮತದಾನದ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7 ಗಂಟೆಯಿAದ ಸಂಜೆ 5 ಗಂಟೆಯವರೆಗೆ) ನಡೆಯಲಿದೆ. 2024ರ ನವೆಂಬರ್ 25ರ ಸೋಮವಾರ ರಂದು ಮರು ಮತದಾನದ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7 ಗಂಟೆಯಿAದ ಸಂಜೆ 5 ಗಂಟೆಯವರೆಗೆ) ನಡೆಯಲಿದೆ. 2024ರ ನವೆಂಬರ್ 26ರ ಮಂಗಳವಾರ ರಂದು ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8 ಗಂಟೆಯಿAದ) (ತಾಲ್ಲೂಕು ಕೇಂದ್ರಗಳಲ್ಲಿ) ನಡೆಯಲಿದೆ. 2024ರ ನವೆಂಬರ್ 26ರ ಮಂಗಳವಾರ ರಂದು ಚುನಾವಣೆ ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net