ಯಾದಗಿರಿ ಜಿಲ್ಲೆಯ ಪಡಿತರ ಆಹಾರ ಬಿಡುಗಡೆ

Published on

ಯಾದಗಿರಿ : ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ 2024ರ ನವೆಂಬರ್ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯ ಎಎವೈ 28,513 ಪಡಿತರ ಚೀಟಿಗಳಿದ್ದು, ಪ್ರತಿ ಪಡಿತರ ಚೀಟಿಗಳಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಜೋಳ ಹಾಗೂ ಬಿಪಿಎಲ್ 8,93,987 ಪಡಿತರ ಸದಸ್ಯರಿದ್ದು, ಪ್ರತಿ ಪಡಿತರ ಸದಸ್ಯರಿಗೆ 3 ಕೆಜಿ ಎನ್‌ಎಫ್‌ಎಸ್‌ಎ ಅಕ್ಕಿ ಮತ್ತು 2 ಕೆಜಿ ಜೋಳ ಉಚಿತವಾಗಿ ವಿತರಿಸುತ್ತಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಅನಿಲ ಕುಮಾರ ಡವಳಿಗಿ ತಿಳಿಸಿದ್ದಾರೆ.

ನವೆಂಬರ್-2024ರ ಮಾಹೆಯ ಆಹಾರಧಾನ್ಯ ಪಡೆಯಲು ಇಚ್ಚೆಯನ್ನು ವ್ಯಕ್ತಪಡಿಸಿರುವ ಆದ್ಯತೇತರ ಎಪಿಎಲ್ 4861 ಪಡಿತರ ಚೀಟಿಗಳಿದ್ದು, ಸದರಿ ಎಪಿಎಲ್ ಪಡಿತರ ಚೀಟಿಯ ಫಲಾನುಭವಿಗಳ ಪೈಕಿ ಏಕ ಸದಸ್ಯರ ಪಡಿತರ ಚೀಟಿಗಳಿಗೆ 5 ಕೆಜಿ ಅಕ್ಕಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರ ಪಡಿತರ ಚೀಟಿಗಳಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15 ರೂ.ಗಳ ರಂತೆ ನೀಡಿ ಆಹಾರ ಧಾನ್ಯವನ್ನು ಪಡೆದುಕೊಳ್ಳಬೇಕು.

ಜಿಲ್ಲೆಯ ಎಲ್ಲಾ 403 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರ ಬೆರಳಚ್ಚನ್ನು, ಬಯೋಮೆಟ್ರಿಕ್ ಪಡೆದು ಅಥವಾ ಒ.ಟಿ.ಪಿ ಮುಖಾಂತರ ಪಡಿತರ ವಿತರಿಸಲು  ವ್ಯವಸ್ಥೆ ಮಾಡಲಾಗಿದೆ ಕುಟುಂಬದ ಸದಸ್ಯರಿಗೆ ಲಭ್ಯವಾಗಿರುವ ಅರ್ಹತಾ ಪಡಿತರ ಚೀಟಿ ಪ್ರಕಾರ ತಿಳಿದುಕೊಂಡು ಆಹಾರ ಧಾನ್ಯ ಪಡೆದುಕೊಳ್ಳಬೇಕು. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಉಪ ನಿರ್ದೇಶಕರ ಕಛೇರಿಗೆ ದೂ.ಸಂ.08473 253707 ಅಥವಾ ಸಹಾಯವಾಣಿ 1967 ಸಂಖ್ಯೆಗೆ ದೂರನ್ನು ದಾಖಲಿಸಲು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net