ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಅಕ್ಷರಾಭ್ಯಾಸ

12-06--krs1 (2)
Published on

ಕೆ.ಆರ್.ಸಾಗರ: ಹುಲಿಕೆರೆ ಗ್ರಾಮದ ಕೆ.ಆರ್.ಸಾಗರ ರಸ್ತೆಯಲ್ಲಿರುವ ಬಿ.ಜಿ.ಎಸ ಬಾಲಜಗತ್ ಶಾಲೆಯಲ್ಲಿ ಶಾಲೆಗೆ ನೂತನವಾಗಿ ದಾಖಲಾಗಿರುವ ಮಕ್ಕಳಿಗೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅಕ್ಷರಾಭ್ಯಾಸ ಮಾಡಿಸಿದರು.


ಸರಸ್ವತಿ ದೇವಿ, ಚುಂಚಶ್ರೀಗಳು ಹಾಗೂ ಲೇಖನ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿದ ಪಾಲಕರು ಮಕ್ಕಳ ಜತೆ ಕುಳಿತು ಪೂಜೆ ಸಲ್ಲಿಸಿದರು. ನಂತರ ತಟ್ಟೆಯಲ್ಲಿದ್ದ ಅಕ್ಕಿಯಲ್ಲಿ ಓಂಕಾರ ಬರೆಯುವ ಮೂಲಕ ಅಕ್ಷರಾಭ್ಯಸ ನಡೆಸಿದರು. ನಂತರ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಕ್ಕಳನ್ನು ತಮ್ಮ ಬಳಿ ಕರೆದುಕೊಂಡು ಅಕ್ಷರಾಭ್ಯಾಸ ಮಾಡಿಸಿದರು.


ಬಳಿಕ ಮಾತನಾಡಿದ ಶ್ರೀಗಳು ಇಂದು ನಮ್ಮ ಸಂಸ್ಕೃತಿ ಪಾಲನೆ ಅಗತ್ಯವಾಗಿದೆ. ಕೇವಲ ಶಾಲೆಗೆ ಮಕ್ಕಳನ್ನು ಕಳುಹಿಸಿದ ಮಾತ್ರಕ್ಕೆ ಪಾಲಕರ ಪಾತ್ರ ಮುಗಿಯುವುದಿಲ್ಲ. ತಂದೆ-ತಾಯಿ ಮಕ್ಕಳ ಮೊದಲ ಗುರುವಾಗಿದ್ದು ಪ್ರತಿ ಮಕ್ಕಳ ಚಟುವಟಿಕೆ ಬಗ್ಗೆ ನಿತ್ಯ ಗಮನಹರಿಸಬೇಕು ಎಂದರು.
ಮುಖ್ಯ ಶಿಕ್ಷಕಿ ಕೆ.ಆಶಾ, ಕಚೇರಿ ಸಹಾಯಕ ಅಭಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net