ಶಿಲ್ಪಾ ಜೋಶಿ ದಾಸ ಅವರು ರಚಿಸಿದ ಭಾವ ಸಂಗಮ ಕೃತಿ ಬಿಡುಗಡೆ 9ರಂದು

Shilpa Joshi-2
Shilapa Joshi Das
Published on


ಕಲಬುರಗಿ : ಯುವ ಕವಯತ್ರಿ ಹಾಗೂ ಲೇಖಕಿ ಶಿಲ್ಪಾ ಜೋಶಿ ದಾಸ ಅವರು ರಚಿಸಿರುವ ಚೊಚ್ಚಲ ಕೃತಿ `ಭಾವ ಸಂಗಮ' ಬಿಡುಗಡೆ ಸಮಾರಂಭವು ಜೂ.೯ ರಂದು ಬೆಳಗ್ಗೆ ೧೦-೩೦ ಗಂಟೆಗೆ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಸಮಾರಂಭದಲ್ಲಿ ಸಾಂಸ್ಕೃತಿಕ ಚಿಂತಕ ಹಾಗೂ ಲೇಖಕ ಮಲ್ಲಿಕಾರ್ಜುನ ಕಡಕೋಳ ಹಾಗೂ ಆರೋಗ್ಯ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ.ರವಿಕಾಂತ ಕ್ಯಾತನಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೇಖಕರ ಪೋಷಕರಾದ ವಸಂತಮಾಲಾ ಮತ್ತು ಡಾ.ಗುರುರಾಜ ಆಚಾರ್ಯ ಜೋಶಿ ಯಡ್ರಾಮಿ ಅವರು ಕೃತಿ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಕೃತಿ ಪರಿಚಯಿಸುವರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಲಗತಿಪ್ಪಿ ವಹಿಸುವರು ಎಂದು ಶ್ರೀಗುರು ಕಾಲೇಜಿನ ಉಪನ್ಯಾಸಕ ಸುಧೀಂದ್ರ ದಾಸ ಮತ್ತು ಪಾಲಿಸಿಗಳ ಆರ್ಥಿಕ ಸಲಹೆಗಾರ ಎನ್.ಎ.ಜೋಶಿ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸುವಂತೆ ಕಸಾಪ ಪದಾಧಿಕಾರಿಗಳು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net