ಹಾಲು ನೈವೇಧ್ಯ ಸಂಗ್ರಹಿಸಿ ನಿರ್ಗತಿಕರಿಗೆ ವಿತರಣೆ

IMG-20230822-WA0039
Published on

ನಾಗರ ಪಂಚಮಿಯನ್ನು ಅರ್ಥಪೂರ್ಣ ಆಚರಿಸಿದ ವಿಜಿ ವಿಮೆನ್ಸ್ ಕಾಲೇಜಿನ  ತಂಡ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹೈಕ ಶಿಕ್ಷಣ ಸಂಸ್ಥೆಯ ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ  ರಾಷ್ಟಿçÃಯ ಸೇವಾ ಯೋಜನೆಯ ಅ ಮತ್ತು ಬ  ಹಾಗೂ ಸ್ವಯಂ ನಿಧಿ ಘಟಕಗಳು ಮತ್ತು ಪ್ರಾಣಿಶಾಸ್ತç ವಿಭಾಗದ ಆಶ್ರಯದಲ್ಲಿ ನಾಗರ ಪಂಚಮಿಯAದು  ಸಾರ್ವಜನಿಕರಿಂದ ಹಾಲು ಮತ್ತು ನೈವೇದ್ಯ ಸಂಗ್ರಹಿಸಿ ನಿರ್ಗತಿಕರಿಗೆ ವಿತರಿಸುವ ಮಹತ್ವದ ಕಾರ್ಯವನ್ನು ಮಾಡಿದರು.
ನಗರದ ಕೋರಂಟಿ ಹನುಮಾನ ದೇವಸ್ಥಾನದ ಹತ್ತಿರದಲ್ಲಿರುವ ನಾಗರ ಕಟ್ಟೆಯಲ್ಲಿ  ಹಾಲು ಎರೆಯಲು ಬಂದ ಮಹಿಳೆಯರ  ಮನವೊಲಿಸಿ ಅವರು ತಂದಿದ್ದ ಹಾಲು ಹಾಗೂ  ನೈವೇದ್ಯವನ್ನು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಬೇರೊಂದು ಡಬ್ಬದಲ್ಲಿ ಸಂಗ್ರಹಿಸಿದರು. ಬಳಿಕ ಅದನ್ನು ಅನಾಥರು, ಭಿಕ್ಷುಕರು, ನಿರ್ಗತಿಕರಿಗೆ ವಿತರಿಸಲಾಯಿತು.
ಹಾಲು ಮತ್ತು ಆಹಾರವನ್ನು ಅವಶ್ಯ ಇದ್ದವರಿಗೆ ವಿತರಿಸುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಮಹೇಶ ಗಂವ್ಹಾರ, ರೇಣುಕಾ ಹಾಗರಗುಂಡಗಿ, ಪ್ರಾಣಿಶಾಸ್ತç ವಿಭಾದ ಮುಖ್ಯಸ್ಥೆ ಚಂದ್ರಕಲಾ ಪಾಟೀಲ, ಸ್ವಯಂ ಸೇವಕರಾದ ತ್ರಿವೇಣಿ, ಸವಿತಾ, ಸ್ಫೂರ್ತಿ, ಪವಿತ್ರಾ, ಪ್ರತಿಭಾ ಭಾಗವಹಿಸಿದ್ದರು.
ಮಹಾವಿದ್ಯಾಲಯದ ಈ ಜಾಗೃತಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರಕಿರುವುದು ಖುಷಿ ಸಂಗತಿ' ಎಂದು  ನ್ಯಾಕ್ ಸಂಯೋಜಕ ಮೋಹನರಾಜï ಪತ್ತಾರ ತಿಳಿಸಿದರು.
====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net