

ಗುಂಡ್ಲುಪೇಟೆ: ಕಾರ್ತಿಕ ಮಾಸದ ಉತ್ಥಾನ ದ್ವಾದಶಿ ಅಂಗವಾಗಿ ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಮಂಗಳವಾರ ರಾತ್ರಿ ತುಳಸಿ ಗಿಡದೊಂದಿಗೆ ನೆಲ್ಲಿಕಾಯಿ ಕೊಂಬೆಯನ್ನು ನೆಟ್ಟು ಶ್ರೀ ಕೃಷ್ಣನ ವಿಗ್ರಹವನ್ನಿರಿಸಿ ಪೂಜೆ ಸಲ್ಲಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ತುಳಸಿಕಟ್ಟೆಗೆ ಸೀರೆಯುಡಿಸಿದ ಮಹಿಳೆಯರು ಸುತ್ತಲೂ ದೀಪಹಚ್ಚಿ ನಾನಾ ವರ್ಣದ ಹೂವುಗಳಿಂದ ಅಲಂಕರಿಸಿ ಭಜನೆಯೊಂದಿಗೆ ತುಳಸಿ ಕಲ್ಯಾಣೋತ್ಸವದ ಪೂಜೆ ನೆರವೇರಿಸಿದರು.