ಎಲ್ಲರ ಮನದಲ್ಲಿ ನೆಲೆ ನಿಂತ ಮರ್ಯಾದಾ ಪುರುಷೋತ್ತಮ

chn rama
Published on

ಚನ್ನಗಿರಿ: ಭಗವಾನ್ ವಿಷ್ಣುವಿನ 7 ನೇ ಅವತಾರವಾಗಿ ಜನಿಸಿದ ಶ್ರೀರಾಮ, ಮರ್ಯಾದಾ ಪುರುಷೋತ್ತಮನಾಗಿ ಎಲ್ಲರ ಮನ ಮನೆಯಲ್ಲಿ ನೆಲೆ ನಿಂತಿದ್ದಾನೆ. ಹಾಗೇ ಆದರ್ಶ ತತ್ವಗಳಿಂದ ಆದರ್ಶ ಪುರುಷ ಎನಿಸಿಕೊಂಡಿದ್ದಾನೆ ಎಂದು ಹಾಲಸ್ವಾಮಿ ವಿರಕ್ತಮಠದ ಡಾ. ಶ್ರೀ ಬಸವ ಜಯಚಂದ್ರ ಸ್ವಾಮಿಗಳು ಹೇಳಿದರು.

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಊರ ಬಾಗಿಲ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ವಿಶ್ವಹಿಂದು ಪರಿಷತ್ ಹಾಗೂ ಬಜರಂಗ ದಳದಿಂದ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂ ಧರ್ಮದಲ್ಲಿ ಶ್ರೀರಾಮನಿಗಿರುವ ಸ್ಥಾನ ಮಹತ್ವದ್ದು. ನ್ಯಾಯ, ಧರ್ಮ ಹಾಗೂ ನಿಷ್ಠೆಯ ಪರಿಪಾಲಕನಾಗಿ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾನೆ ಎಂದರು.

ಈ ವೇಳೆ ಸಮಾಜ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಾರ್ವಜನಿಕ ಆಸ್ಪತ್ರೆ ದಾದಿಯರನ್ನು ಗೌರವಿಸಲಾಯಿತು.

ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಜಿಲ್ಲಾ ಸಂಯೋಜಕ ಎನ್. ರವಿಚಂದ್ರ, ಜಿಲ್ಲಾ ಕೋಶಾಧ್ಯಕ್ಷ ಕೆ.ಎಚ್. ಮಂಜುನಾಥ್, ತಾಲೂಕು ಸಂಯೋಜಕ ಶ್ರೀನಿವಾಸ್, ಹೇಮಚಂದ್ರ, ಪ್ರಮೋದ್, ವಸಂತ್, ಶಿವು, ರಂಜನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net