

ಬೈಂದೂರು: ಉಪ್ಪುಂದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬುಧವಾರ ಶ್ರೀ ಗುರುರಾಯರ 353ನೆ ಆರಾಧನಾ ಮಹೋತ್ಸವ ಆರಂಭಗೊಂಡಿತು.
ಬೆಳಗ್ಗೆ ಪಂಚಾಮೃತ ಅಭಿಷೇಕ, ಪಾದಪೂಜೆ ತೊಟ್ಟಿಲು ಪೂಜೆ, ತುಳಸಿ ಅರ್ಚನೆ ಮಹಾ ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನೆ, ಧಾರ್ಮಿಕ ಕಾರ್ಯಕ್ರಮ, ಮಕ್ಕಳಿಂದ ಭಕ್ತಿ ಸಂಗೀತ ಕಾರ್ಯಕ್ರಮ, ರಾತ್ರಿ ತೊಟ್ಟಿಲು ಪೂಜೆ, ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ನಡೆಯಿತು. ಮಠದ ಗೌರವ ವಿಚಾರಣಾಕರ್ತ ಯು.ಸುಭಾಶ್ಚಂದ್ರ ಪುರಾಣಿಕ ಉತ್ಸವದ ಉಸ್ತುವಾರಿ ವಹಿಸಿದ್ದರು.