

ವಿರಾಜಪೇಟೆ: ಸಿಬ್ಬಂದಿಗೆ ಆರೋಗ್ಯ ಮತ್ತು ಉನ್ನತಿ ಲಭಿಸುವ ಸಲುವಾಗಿ ಸೆಸ್ಕ್ ಕಚೇರಿಯಲ್ಲಿ ಕಡೇ ಆಷಾಢ ಶುಕ್ರವಾರ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ ನಡೆಸಲಾಯಿತು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯ ಮತ್ತು ಪಾಲನೆ ವಿರಾಜಪೇಟೆ ಉಪವಿಭಾಗದ ಸಿಬ್ಬಂದಿ ಮತ್ತು ಅನುಮತಿ ಪಡೆದ ಗುತ್ತಿಗೆದಾರರ ಸಹಯೋಗದಲ್ಲಿ ನಗರದ ಮೂರ್ನಾಡು ರಸ್ತೆಯ ಶಾಖಾ ಕಚೇರಿಯಲ್ಲಿ 2ನೇ ವರ್ಷದ ಶ್ರೀ ಚಾಮುಂಡೇಶ್ವರಿ ಪೂಜೆ ಮತ್ತು ಸಿಬ್ಬಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ವಿರಾಜಪೇಟೆಯ ಡಾಕ್ಟರ್ ಅಗರ್‌ವಾಲ್ ನೇತ್ರ ಚಿಕಿತ್ಸಾಲಯದ ನುರಿತ ತಜ್ಞರಿಂದ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆದಾರರು ಹಾಗೂ ಕುಟುಂಬ ಸದಸ್ಯರಿಗೆ ಉಚಿತ ನೇತ್ರ ತಪಾಸಣೆ ನಡೆಯಿತು. ಸೀತಾರಾಮ ಭಟ್ ಚಾಮುಂಡೇಶ್ವರಿ ದೇವಿಗೆ ಪೂಜೆ ನೆರವೇರಿಸಿದರು. ಬಳಿಕ ಪ್ರಸಾದ ವಿತರಣೆ ನಡೆಯಿತು.
ವಿರಾಜಪೇಟೆ ಉಪವಿಭಾಗ ವ್ಯಾಪ್ತಿಯ ಸೆಸ್ಕ್ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ನೌಕರರು, ವಿರಾಜಪೇಟೆ ತಾಲೂಕು ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.