ಭಗವಂತನ ಸಾಕ್ಷಾತ್ಕಾರಕ್ಕೆ ಆರಾಧನೆ ಅಗತ್ಯ

ಕಂಪ್ಲಿ ವಾಸವಿ ವಿದ್ಯಾಸಂಸ್ಥೆಯಲ್ಲಿ ಕಸಪಾ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮವನ್ನು ಸಂಸ್ಥೆ ನಿರ್ದೇಶಕ ರಾಮಲಿಂಗಯ್ಯ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಕಪ್ಪ ಚಿತ್ರಗಾರ್, ಮುಖ್ಯಶಿಕ್ಷಕ ರಾಜು ಬಿಲಂಕರ್, ಶಿಕ್ಷಕಿ ಬಿ.ಗಾಯತ್ರಿ, ಪ್ರಮುಖರಾದ ತಿಪ್ಪಯ್ಯ ಶ್ರೇಷ್ಠಿ, ನಾಗೇಶ್ವರ ರಾವ್ ಇತರರಿದ್ದರು.

Published on

ಕಂಪ್ಲಿ: ಭಗವಂತನ ಸಾಕ್ಷಾತ್ಕಾರಕ್ಕೆ ನಿಷ್ಕಲ್ಮಷ ಭಕ್ತಿ ಮತ್ತು ಆರಾಧನೆ ಮುಖ್ಯ ಎಂದು ವಾಸವಿ ಕನ್ನಡ ಹಿಪ್ರಾ ಅನುದಾನಿತ ಶಾಲೆ ಶಿಕ್ಷಕಿ ಬಿ.ಗಾಯತ್ರಿ ಹೇಳಿದರು.

ನಗರದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕು ಕಸಾಪ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉಡುಪಿ ಪದ್ಮಾವತೆಮ್ಮ ರಘುರಾಮಾಚಾರ್, ರುಕ್ಮಿಣಮ್ಮ ಎಸ್.ಎಂ.ನಾರಾಯಣಶೆಟ್ಟಿ, ದಿ.ಎಂ.ಪಿ.ಪ್ರಕಾಶ್ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಂಪನ ಆದಿಪುರಾಣ ಮತ್ತು ದಾಸ ಸಾಹಿತ್ಯ ಕುರಿತು ಮಾತನಾಡಿದರು. ದಾಸ ಸಾಹಿತ್ಯ ಲೌಕಿಕ ಜಂಜಾಟದಿಂದ ಪಾರು ಮಾಡುತ್ತದೆ. ಪಂಪನ ಆದಿಪುರಾಣ ಗುರುವಿನ ಉಪದೇಶ ಪಡೆದು ಸಾಧನೆಯಿಂದ ತೀರ್ಥಾಂಕನಾದ ಕತೆಯ ಆಗರವಾಗಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಸಂಸ್ಥೆಯ ನಿರ್ದೇಶಕ ರಾಮಲಿಂಗಯ್ಯ, ಮುಖ್ಯಶಿಕ್ಷಕ ರಾಜು ಬಿಲಂಕರ್, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಹಾದಿಮನಿ ಕಾಳಿಂಗ ವರ್ಧನ, ಯು.ಎಂ.ವಿದ್ಯಾಶಂಕರ, ಎಲಿಗಾರ ವೆಂಕಟರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net