ಮಳೆಗಾಗಿ ಹೊನ್ನೂರು ಗ್ರಾಮಸ್ಥರಿಂದ ಪೂಜೆ

Oplus_131072
Oplus_131072
Published on

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದ ಕೆರೆಯ ಅರಳಿಮರದ ಬಳಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸಿದರು.


ಮಣ್ಣಿನಲ್ಲಿ ಮಾಡಿದ ಮಳೆರಾಯನ ಮೂರ್ತಿ ಇಟ್ಟು, ಅದರ ಮುಂದೆ ಅಕ್ಕಿ ಗಂಜಿ, ಮಜ್ಜಿಗೆ, ಸೊಪ್ಪುಗಳಿಂದ ಮಾಡಿದ್ದ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಕೆಲ ಯುವಕರ ತಂಡ ಮನೆ ಮನೆಗೆ ತೆರಳಿ ಪೂಜೆ ಹಾಗೂ ನೈವೇದ್ಯಕ್ಕೆ ಬೇಕಿರುವ ವಸ್ತುಗಳನ್ನು ಕೇಳಿ ಪಡೆದು ಎಲ್ಲರೂ ಒಂದೆಡೆ ಸೇರಿ ಇದರಿಂದ ನೈವೇದ್ಯ ತಯಾರಿಸಿ ಮರದ ಬುಡದಲ್ಲಿಟ್ಟು ಪೂಜೆ ಸಲ್ಲಿಸಿದರು.


ಗ್ರಾಮದ ನಿವಾಸಿ ಮಹದೇವಯ್ಯ ಮಾತನಾಡಿ, ಈ ಬಾರಿ ಮಳೆ ಕೈ ಕೊಟ್ಟಿದೆ, ಇನ್ನಿಲ್ಲದಂತೆ ಬಿಸಿಲಿನ ಬೇಗೆ ಕಾಡುತ್ತಿದೆ. ಕೆರೆ ಕಟ್ಟೆಗಳು ಒಣಗಿವೆ, ರೈತರ ಫಸಲುಗಳು ಒಣಗುತ್ತಿವೆ. ಈ ಬಿಸಿಲಿನ ಬೇಗ ಕಳೆದ ಹಲವು ದಶಕಗಳ ನಂತರ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಮಳೆಯಾಗುವ ವಾಡಿಕೆ ಇತ್ತು. ಆದರೆ ಈ ಬಾರಿ ಮಳೆ ಇಲ್ಲ, ಸೆಕೆ ವಿಪರೀತವಾಗಿದೆ. ಮನೆಯಿಂದ ಆಚೆ ಬರಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಇಲ್ಲಿ ಮಳೆ ಬಾರದಿದ್ದಾಗ ಈ ರೀತಿ ಪೂಜೆ ಸಲ್ಲಿಸುವ ವಾಡಿಕೆ ಅನಾದಿ ಕಾಲದಿಂದಲೂ ಇದೆ. ಹಾಗಾಗಿ ಗ್ರಾಮಸ್ಥರೆಲ್ಲ ಸೇರಿ ಪೂಜೆ ಸಲ್ಲಿಸುತ್ತಿದ್ದು, ಮಳೆ ಬರುವ ನಂಬಿಕೆ ಇದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net